spot_img
Wednesday, January 22, 2025
spot_imgspot_img
spot_img
spot_img

ಕಾಳು ಮೆಣಸು ಕರಾಮತ್ತು: ಕೃಷಿಕನ ಮುಡಿಗೇರಿತು ಪ್ರಶಸ್ತಿಯ ಗರಿ

ರಾಧಾಕೃಷ್ಣ ತೊಡಿಕಾನ

ಅದು ಹಚ್ಚಹಸಿರಿನ ತೋಟ. ಸಮಗ್ರ ಕೃಷಿಯೇ ಜೀವಾಳ. ಕಾಳು ಮೆಣಸು, ಕಾಫಿ, ಅಡಿಕೆ, ಏಲಕ್ಕಿ ಹಲವು ಬೆಳೆಗಳಿದ್ದರೂ ಕಪ್ಪು ಬಂಗಾರವೆಂದೇ ಪರಿಗಣಿಸಲ್ಪಟ್ಟ ಕಾಳುಮೆಣಸು ಕೃಷಿಕ ಜಿ.ಎಮ್. ಲಕ್ಷ್ಮಣ ಗೌಡರಿಗೆ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯ ಗರಿ ಮುಡಿಗೇರಿಸಿತು

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೌತಹಳ್ಳಿಯ ಜಿ.ಎಂ. ಲಕ್ಷ್ಮಣ ಗೌಡರು ಕಾಳು ಮೆಣಸಿನಿಂದಲೇ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡವರು. ಮೂಡಿಗೆರೆಯಿಂದ ಸುಮಾರು 2೦ ಕಿ.ಮೀ ದೂರದಲ್ಲಿರುವ ಗೌತಹಳ್ಳಿ ಸಾಂಪ್ರದಾಯಿಕ ಕೃಷಿಕರನ್ನು ಒಡಲಲ್ಲಿ ಇರಿಸಿಕೊಂಡು ಬೆಳೆದ ಹಳ್ಳಿಯದು. ಲಕ್ಷ್ಮಣ ಗೌಡರು ಎಸ್.ಎಸ್.ಎಲ್.ಸಿ ವಿದ್ಯಾಭ್ಯಾಸ ಮುಗಿಸಿದ ನಂತರ ತನ್ನ ಹದಿನೆಂಟನೆಯ ವಯಸ್ಸಿನಲ್ಲೇ ಕೃಷಿಕ್ಷೇತ್ರದ ಬಗ್ಗೆ ಆಸಕ್ತಿಯಿಂದ ತೊಡಗಿಸಿಕೊಂಡರು. ಕೃಷಿಯನ್ನು ತನ್ನ ಕಾಯಕ ಧರ್ಮವನ್ನಾಗಿರಿಸಿ ಕೃಷಿಯಿಂದಲ್ಲೇ ರಾಷ್ಟç ಮಟ್ಟದಲ್ಲಿ ಗುರುತಿಸಿಕೊಂಡವರಲ್ಲದೆ ವಿದೇಶಗಳಿಗೂ ಹೋಗಿಬಂದವರು.

ತನ್ನಲ್ಲಿರುವ 14 ಎಕ್ರೆ ಜಮೀನಿನಲ್ಲಿ ಎರಡು ಎಕ್ರೆಯನ್ನು ಬತ್ತದ ಗದ್ದೆಯಾಗಿ ಉಳಿಸಿಕೊಂಡರೆ ಉಳಿದ 10 ಎಕ್ರೆಯನ್ನು ಸಮ್ಮಿಶ್ರ ಕೃಷಿಯ ಆಡಂಬೋಲವಾಗಿ ಮಾಡಿಕೊಂಡರು. ಪರಿಸರದ ಸಾಂಪ್ರದಾಯಿಕ ಕಾಫಿ ಬೆಳೆಯಿದೆ. ಮಿಶ್ರ ಬೆಳೆಯಾಗಿ ಕಾಳುಮೆಣಸು, ಅಡಿಕೆ ನೆಚ್ಚಿಕೊಂಡರು. ಕಾಫಿ ಬೆಳಯೇ ಪ್ರಧಾನವಾಗಿದ್ದರೂ ಅವರಿಗೆ ತಂದುಕೊಟ್ಟ ಯಶಸ್ಸಿನ ಬೆಳೆ ಎಂದರೆ ಕಾಳುಮೆಣಸು.

ವರ್ಷವೊಂದಕ್ಕೆ 8000 ಕೆಜಿ ಕಾಳುಮೆಣಸು ಫಸಲು ಪಡೆಯುವ ಇವರಲ್ಲಿ 1ರಿಂದ 25 ವರ್ಷಗಳವರೆಗಿನ ಕಾಳು ಮೆಣಸು ಬಳ್ಳಿಗಳಿವೆ. ಅಡಿಕೆ, ಹಾಲುವಾಣ, ಸಿಲ್ವರ್, ಕಾಡು ಜಾತಿಯ ಇತರ ಮರಗಳಿಗೆ ಆತು ನಿಂತ ಕಾಳು ಮೆಣಸು ಗೌಡರನ್ನೂ ಎತ್ತರಕ್ಕೆ ಬೆಳೆಯುವಂತೆ ಮಾಡಿದೆ.

ಅವರ ತೋಟ ಸುತ್ತಿದರೆ ಹತ್ತಾರು ತಳಿಯ ಕಾಳು ಮೆಣಸಿನ ಬಳ್ಳಿಗಳು…ಎಲ್ಲವೂ ಅದರದೇ ಆದ ವೈಶಿಷ್ಟö್ಯತೆಯನ್ನು ಹೊಂದಿದವು. ಹಸಿರು ಹೊದ್ದು ಬೆಳೆದ ಬಳ್ಳಿಗಳು. ಎಲೆಗಳ ನಡುವೆ ಪಚ್ಚೆ ಮತ್ತು ಕೆಂಪು ಮಣಿಗಳನ್ನು ಪೋಣಿಸಿದಂತೆ ಕಾಣುವ ಗೆರೆಗಳು…

ಶ್ರೀಕರ, ಶುಭಕರ, ಬೀರಕಮುಂಡ, ಶಿವಂ, ನೀಲಮಂಡಿ, ವಡಕಮ್, ಪಂಚಮಿ, ಸಿಗಂದಿನಿ, ಪಣಿಯೂರಿನ ವಿವಿಧ ತಳಿಗಳು ಸೇರಿದಂತೆ 10-15  ಕ್ಕೂ ಹೆಚ್ಚು ತಳಿಗಳನ್ನು ಅವರು ನೆಟ್ಟು ಬೆಳೆಸಿದ್ದಾರೆ. ಅದಲ್ಲದೆ ಸ್ಥಳೀಯ ತಳಿಗಳೂ ಅವರ ತೋಟದಲ್ಲಿದೆ. ಎಲ್ಲವೂ ಒಂದಕ್ಕೊAದು ತಾನೇನು ಕಡಿಮೆ ಎಂಬಂತೆ ಇಲ್ಲಿ ಬೆಳೆದು ನಿಂತಿವೆ.

25-40 ಅಡಿ ಎತ್ತರದವರೆಗೂ ಬೆಳೆದು ನಿಂತ ಬಳ್ಳಿಗಳಿಂದ ಸುಮಾರು 75 ಕೆಜಿ ಮೆಣಸು ಕೊಯ್ಲು ಮಾಡಲಾಗುತ್ತಿದ್ದು ಕಡಿಮೆಯೆಂದರೂ 25 ಕೆಜಿ ಒಣ ಮೆಣಸು ಪಡೆಯುತ್ತಾರೆ. ಕಾಳುಮೆಣಸಿಗೆ ಸಕಲೇಶಪುರ, ಮೂಡಿಗೆರೆ, ಚಿಕ್ಕಮಗಳೂರಿನಲ್ಲಿ ಒಳ್ಳೆಯ ಮಾರುಕಟ್ಟೆಯಿದೆ. ಅಲ್ಲೇ ಮಾರಾಟ ಮಾಡುವುದಾಗಿ ಹೇಳುತ್ತಾರೆ. ಕಾಳು ಮೆಣಸನ್ನು ಗೆರೆಗಳಿಂದ ಬಿಡಿಸುವುದರಿಂದ ಸ್ವಚ್ಛಗೊಳಿಸುವವರೆಗೆ ಯಂತ್ರಗಳನ್ನು ಹೆಚ್ಚಾಗಿ ಬಳಸುತ್ತಾರೆ. ಕಾಳು ಮೆಣಸು ಬೆಳೆ ಬೆಳೆಯಲು ಇವರು ನೆಚ್ಚಿಕೊಂಡಿರುವುದು ಸಾವಯುವ ಗೊಬ್ಬರ. ಎರೆಗೊಬ್ಬರ, ಸಗಣಿ ಗೊಬ್ಬರ, ಕುರಿ ಗೊಬ್ಬರವನ್ನು ಒಂದು ಬುಟ್ಟಿ ನೆಡುವಾಗ ಹಾಕುತ್ತಾರೆ. ಒಂದು ಕಾಲು ಆಡಿ ಆಳ-ಅಗಲ ಗುಳಿ ತೋಡಿ ಮಾಡಿ ಬಳ್ಳಿಗಳನ್ನು ನೀಡುತ್ತಾರೆ. ಸಣ್ಣ ಗಿಡಗಳಿಗೆ ಜನವರಿಯಿಂದ ನೀರುಣಿಸುತ್ತಾರೆ

ತೋಟದ ಬೆಳೆಗಳಿಗೆ ರೋಗ ಬಾಧೆ ಇದ್ದೇ ಇರುತ್ತದೆ. ಇವರ ತೋಟವು ಕೂಡ ಅದಕ್ಕೆ ಹೊರತಾಗಿಲ್ಲ. ರೋಗ ಬಾಧೆ ಕಾಣಿಸಿಕೊಂಡ ಕೂಡಲೇ ಆ ಬಳ್ಳಿಗಳನ್ನು ಕಿತ್ತು ತೆಗೆಯುವುದಲ್ಲದೆ ಹೊಸ ಬಳ್ಳಿ, ನಾಟಿ ಮಾಡುತ್ತಾರೆ. ರೋಗಪೀಡಿತವಾಗಿ ಬಳ್ಳಿ ಸತ್ತರೂ ನೆಡುವುದನ್ನ ನಿಲ್ಲಿಸದೆ ಮತ್ತೆ ಮತ್ತೆ ನೆಡುವುದರಿಂದ ಅವರ ತೋಟದ ತುಂಬಾ ಆರೋಗ್ಯಕರ ಬಳ್ಳಿಗಳನ್ನು ಕಾಣಲು ಸಾಧ್ಯವಾಗಿದೆ

ಕಾಫಿ ಉತ್ತಮ ಫಸಲು

ಲಕ್ಷ್ಮಣಗೌಡರು ಕಾಳುಮೆಣಸು ಕೃಷಿಯಿಂದ ಹೆಸರುವಾಸಿಯಾದರೂ ಆ ಪರಿಸರದ ಸಾಂಪ್ರದಾಯಿಕ ವಾಣಿಜ್ಯ ಬೆಳೆ ಕಾಫಿಗೂ ಅಷ್ಟೇ ಮಹತ್ವ ನೀಡಿದ್ದಾರೆ. 1೦ ಎಕರೆಯಲ್ಲಿ ರೋಬೋಸ್ಟಾ, ಅರೇಬಿಕ್ ಹಾಗೂ ಇತರ ತಳಿಗಳ ಕಾಫಿ ಬೆಳೆಯಿದೆ. ಅವು ಕೂಡ ತನ್ನನ್ನು ಬೆಳೆಸಿ ಪೋಷಿಸಿದಾತನ ಕೈಬಿಟ್ಟಿಲ್ಲ. ಪೈಪೋಟಿಗೆ ನಿಂತಂತೆ ಎರಡು ತಳಿಗಳು 120-150 ಮೂಟೆ ಸರಾಸರಿ ಇಳುವರಿಯನ್ನು ಕೊಡುತ್ತಾ ಬಂದಿವೆ. ಈ ವರ್ಷ ಮಾಮೂಲಿಗಿಂತ ಸ್ವಲ್ಪ ಹೆಚ್ಚು ಸಿಗಬಹುದು ಎಂಬ ನಿರೀಕ್ಷೆ ಗೌಡರದು.

ಜಾಗ ಎಷ್ಟಿದೆ ಎಂಬುದು ಮುಖ್ಯವಲ್ಲ. ಇದ್ದ ಜಾಗದಲ್ಲಿ ಉತ್ತಮವಾಗಿ ಕೃಷಿ ಮಾಡುವುದೇ ಮುಖ್ಯ.10 ಎಕರೆಯಷ್ಟು ಜಮೀನು ಇದ್ದವರು ಎಷ್ಟೇ ಓದಿರಲಿ. ಶ್ರಮ ಮತ್ತು ಶ್ರದ್ಧೆಯಿಂದ ಕೆಲಸ ಮಾಡಿದರೆ ಐಟಿ, ಬಿಟಿ, ಸರಕಾರಿ ಕೆಲಸಬೇಕಾಗಿಲ್ಲ. ಆ ಆದಾಯವನ್ನು ತಮ್ಮ ಕೃಷಿಕ್ಷೇತ್ರದಿಂದಲೇ ಆರಾವiವಾಗಿ ಪಡೆಯಬಹುದು. ನಮ್ಮದೇ ದುಡಿಮೆ. ನಮ್ಮದೇ ಗರಿಮೆ. ಜೊತೆಗೆ ಶುದ್ಧ ಗಾಳಿ, ನೀರು, ಆಹಾರ ನಮ್ಮದಾಗಿಸಿಕೊಳ್ಳಬಹುದು ಎನ್ನುತ್ತಾರೆ ಲಕ್ಷ್ಮಣ ಗೌಡರು. ಕೃಷಿಯಿಂದ ಅವರು ಪಡೆಯುವ ತಿಂಗಳ ಆದಾಯ 5  ಲಕ್ಷ ಅಂದರೆ ಕೃಷಿಯಲ್ಲೂ ಸಂಪಾದನೆ ಮಾಡಬಹುದೇ ಎಂದು ಅಚ್ಚರಿಯಾದೀತು. ಆದರೆ ಅದರ ಹಿಂದೆ ಕಠಿನ ಶ್ರಮ, ಸಂಪೂರ್ಣವಾಗಿ ತೊಡಗಿಕೊಳ್ಳುವಿಕೆಯ ಮನಸ್ಸಿದೆ.

ಬತ್ತದ ಭತ್ತದ  ಕೃಷಿ

ಭತ್ತದ ಕೃಷಿ ಇತ್ತೀಚಿಗಿನ ದಿನಗಳಲ್ಲಿ ಕಣ್ಮರೆಯಾಗುತ್ತಾ ಬರುತ್ತಿದೆ. ಬಹಳಷ್ಟು ಮಂದಿ ವಾಣಿಜ್ಯ ಬೆಳೆಯುತ್ತ ವಾಲುತ್ತಿರುವುದು ಒಂದೆಡೆಯಾದರೆ ಭತ್ತದ ಕೃಷಿಗೆ ಬೇಕಾಗುವ ಕೃಷಿ ಕಾರ್ಮಿಕರು ತಮಗೆ ಬೇಕಾದ ಸಂದರ್ಭದಲ್ಲಿ ಸಿಗದಿರುವುದೇ ಕಾರಣ. ಆದರೆ ಲಕ್ಷ್ಮಣ ಗೌಡರು ಎಷ್ಟೇ ಸಮಸ್ಯೆ ಆದರೂ ಬತ್ತದ ಕೃಷಿಯನ್ನು ಬಿಟ್ಟಿಲ.್ಲ ಎರಡು ಎಕರೆಯಷ್ಟು ಭತ್ತದ ಕೃಷಿಯಿದೆ. ಮನೆಗೆ ಬೇಕಾದ ಭತ್ತವನ್ನು ತಾವೇ ಬೆಳೆಸಿ ಉಳಿಸಿಕೊಳ್ಳಬೇಕು ಎಂಬ ಅದಮ್ಯ ಆಸೆಯಿಂದ ಲಾಭ- ನಷ್ಟಗಳ ಲೆಕ್ಕ ಬದಿಗಿರಿಸಿ ಭತ್ತ ಬೆಳೆಯುತ್ತಾರೆ.

ಒಂದು ಹಸು ಒಂದು ಲಕ್ಷ

ಕೃಷಿಕರಿಂದ ಮೇಲೆ ಕೊಟ್ಟಿಗೆಯಲ್ಲಿ ದನಕರುಗಳಿರುವುದು ಶೋಭೆ. ಕೃಷಿಕರಿಗೆ ಅದು ಹೊರೆಯಲ್ಲ. ಸಾಂಪ್ರದಾಯಿಕವಾಗಿ ಬೆಳೆದು ಬಂದ ಪದ್ಧತಿ ಬದ್ಧತೆ, ಲಕ್ಷ್ಮಣ ಗೌಡರು ಎರಡು ಹಸು ಹಾಗೂ ಒಂದು ಕರು ಸಾಕಿದ್ದಾರೆ. ಇವೇನು ಬಹಳಷ್ಟು ಹಾಲು ಕೊಡುವ ದೊಡ್ಡ ತಳಿಗಳಲ್ಲ. ಅವು ಮಿಶ್ರ ತಳಿಯವು. ದನ ಸಾಕಾಣೆ ಕಷ್ಟ ಎಂದು ಇತ್ತೀಚಿನ ದಿನಗಳಲ್ಲಿ ದನ ಸಾಕಾಣೆಯನ್ನು ಬಿಟ್ಟು ಎಲ್ಲಿಂದಲೋ ಗೊಬ್ಬರ ತಂದು ತೋಟಕ್ಕೆ ಸುರಿಯುತ್ತಾರೆ. ಜೊತೆಗೆ ರಾಸಾಯನಿಕ ಗೊಬ್ಬರದ ಮೊರೆ ಹೋಗುತ್ತಾರೆ. ಆದರೆ ಲಕ್ಷ್ಮಣ ಗೌಡರ ಅನುಭವವೇ ಬೇರೆ. ಒಂದು ಹಸುವಿದ್ದರೆ ಒಂದು ಲಕ್ಷದವರೆಗೂ ಆದಾಯ ಪಡೆಯಬಹುದೆಂಬುದು ಅವರ ದೃಢ ನಿಲುವು. ಅದನ್ನು ಸಾಧಿಸಿ ತೋರಿಸಿದ್ದಾರೆ ಕೂಡಾ.

ಸೆಗಣಿಯನ್ನು ಬಳಸಿಕೊಂಡು ಎರೆ ಗೊಬ್ಬರವನ್ನು ತಯಾರಿಸಲಾಗುತ್ತದೆ. ಹಾಲು ಮಾರಾಟ ಮಾಡುವುದಿಲ್ಲ. ಅದರಿಂದ ಬೆಣ್ಣೆ ತಯಾರಿಸುತ್ತಾರೆ. ಮನೆ ಬಳಕೆಗೆ ಬೇಕಾದಷ್ಟು ಇರಿಸಿಕೊಂಡು ಉಳಿದದ್ದನ್ನು ಮಾರಾಟ ಮಾಡುತ್ತಾರೆ. ಬೆಣ್ಣೆ ತುಪ್ಪ ಬೇಕಾದವರು ಮನೆಗೆ ಬಂದು ಖರೀದಿಸುತ್ತಾರೆ. ದನ ಸಾಕಾಣೆಗೆ ಕೆಲಸದಾಳುಗಳನ್ನು ಆಶ್ರಯಿಸುವುದಿಲ್ಲ. ಮನೆಯವರೇ ಕೆಲಸಗಳನ್ನು ನಿಭಾಯಿಸುತ್ತಾರೆ. ಅದರಿಂದಲೂ ಒಂದು ರೀತಿಯ ಸಂತೋಷ. ಖುಷಿಯಿದೆ

ಮೀನು ಸಾಕಣೆ

ಅವರ ಜಮೀನಿನಲ್ಲಿ ಎರಡು ಕೆರೆಗಳನ್ನು ನಿರ್ಮಿಸಿಕೊಂಡಿದ್ದಾರೆ. 200  150  ಅಡಿಯ ಉದ್ದಗಲವಿರುವ 25 ಅಡಿ ಆಳದ ಎರಡು ಕೆರೆಗಳು ಇವೆ. ಅವುಗಳಿಂದಲೇ ಅವರು ಕೃಷಿಗೆ ಬೇಕಾದ ನೀರು ಉಣಿಸುತ್ತಾರೆ. ನೀರಿಗಾಗಿ ಕೆರೆ ನಿರ್ಮಿಸಿಕೊಂಡರೂ ಅದನ್ನು ಹಾಗೇ ಬಿಡುವುದಕ್ಕೆ ಹೋಗಲಿಲ್ಲ. ರೋಹು, ಕಾಟ್ಲ, ತಿಲೋಪಿಯಾ ಮೊದಲಾದ ಮೀನುಗಳನ್ನು ಸಾಕಿದ್ದಾರೆ. ಕೆರೆಯ ನೀರು ಕಡಿಮೆಯಾಗುತ್ತಾ ಬರುತ್ತಿದ್ದಂತೆ ದೊಡ್ಡದಾದ ಮೀನುಗಳನ್ನು ಮಾರಾಟ ಮಾಡುತ್ತಾರೆ. ಇದರಿಂದಲೂ ಆದಾಯವಿದೆ. ಬೆಳೆಗಳ ಪರಾಗ ಸ್ಪರ್ಶಕ್ಕೆ ಅನುಕೂಲವಾಗುವಂತೆ ಜೇನು ಕೃಷಿಯೂ ಇದೆ

ಕೃಷಿ ವಿಜ್ಞಾನ ಕೇಂದ್ರ, ಸಂಬಾರ ಮಂಡಳಿ, ಕಾಫಿ ಸಂಶೋಧನಾ ಕೇಂದ್ರ ಮತ್ತು ಸಾಂಬಾರು ಬೆಳೆಗಳ ಸಂಶೋಧನಾ ಕೇಂದ್ರಗಳಿಂದ ಮಾಹಿತಿ ಮಾರ್ಗದರ್ಶನವನ್ನು ಕೃಷಿ ತಜ್ಞ ಹಾಗೂ ವಿಜ್ಞಾನಿ ವಿ.ಎನ್. ವೇಣುಗೋಪಾಲ್ ಅವರ ಮಾಹಿತಿ, ಸಲಹೆ ಸೂಚನೆಗಳನ್ನು ಪಡೆಯುತ್ತಾರೆ.

ಕಾಳುಮೆಣಸು ಕೃಷಿ ಸಾಧನೆಗಾಗಿ ರಾಷ್ಟಿçÃಯ ಮಟ್ಟದ ಪ್ರಶಸ್ತಿಯಾದ ವೈ. ಆರ್. ಶರ್ಮ ಮೆಮೋರಿಯಲ್ ಅವಾರ್ಡ್ ಈ ಬಾರಿ ಇವರ ಮುಡಿಗೇರಿದೆ. ಎರಡು ವರ್ಷಕ್ಕೊಮ್ಮೆ ಕೊಡಮಾಡುವ ಈ ಪ್ರಶಸ್ತಿಗೆ ಲಕ್ಷ್ಮಣ ಗೌಡರು ಪಾತ್ರರಾಗಿದ್ದಾರೆ. ಸಮಗ್ರ ಕೃಷಿಗಾಗಿ ಶಿವಮೊಗ್ಗ ಕೃಷಿ ವಿವಿಯಿಂದಲೂ ಸನ್ಮಾನಿತರಾಗಿದ್ದಾರೆ.

ಮಾಹಿತಿಗೆ ಮೊ. 9449549234

 

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group