ತಪಸ್ಯಾ ಫೌಂಡೇಶನ್ ಹಾಗೂ ಜಿಲ್ಲಾಡಳಿತದ ಸಹಯೋಗದೊಂದಿಗೆ ನಡೆಯುವ ಮಂಗಳೂರಿನ ತಣ್ಣೀರು ಬಾವಿ ಬೀಚ್ ಉತ್ಸವದ ಸಂದರ್ಭದಲ್ಲಿ ಮೂರು ದಿನಗಳ ಕಾಲ ಕೃಷಿ ಮೇಳವನ್ನು ಹಮ್ಮಿಕೊಳ್ಳಲಾಗಿದೆ
2025 ಜನವರಿ 31 ರಿಂದ ಫೆಬ್ರವರಿ 2ರವರೆಗೆ ನಡೆಯಲಿರುವ ಈ ಉತ್ಸವದಲ್ಲಿ ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಸಾವಯುವ ಕೃಷಿಗೆ ಪೂರಕವಾದ ಮಾಹಿತಿಗಳು, ಪರಂಪರೆಯ ಕೃಷಿಯ ಸಾಧ್ಯತೆ-ಬಾಧ್ಯತೆ ಮತ್ತು ಕೃಷಿ ಪುನರ್ ಜೀವನ ಕುರಿತಂತೆ ರೈತರಿಗೆ ಮಾಹಿತಿ ಮಾರ್ಗದರ್ಶನವನ್ನು ಈ ಸಂದರ್ಭದಲ್ಲಿ ನೀಡಲಾಗುವುದು
ಮಣ್ಣಿನ ಆರೋಗ್ಯ ರಕ್ಷಣೆ, ಸುಸ್ಥಿರ ಬೆಳೆ ಉತ್ಪಾದನೆ, ನೀರು ನಿರ್ವಹಣೆ, ಕೀಟ ಮತ್ತು ರೋಗ ಭಾಧೆ ತಡೆ, ಕೃಷಿ ಯಾಂತ್ರೀಕರಣ, ಜೈವಿಕ ಮತ್ತು ನೈಸರ್ಗಿಕ ಕೃಷಿ ಕಾಡು,ಜೇನು, ಮೀನು,ದನ,ಕೋಳಿ ಸಾಕಣೆ, ಕೃಷಿ ವ್ಯಾಪಾರ ಮತ್ತು ಮಾರುಕಟ್ಟೆ ಅರಣ್ಯ ಕೃಷಿ, ಡಿಜಿಟಲ್ ತಂತ್ರಜ್ಞಾನ ಬಳಕೆ ನಿರ್ವಹಣೆ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಆಹಾರ ಸಂಸ್ಕರಣೆ, ಕೃಷಿಯಲ್ಲಿ ಮಹಿಳಾ ಸಬಲೀಕರಣ, ರೈತ ವಿಷ್ಕಾರಗಳು ಹಾಗೂ ಯಶಸ್ಸಿನ ಕಥೆಗಳು ಸೇರಿದಂತೆ ಹಲವು ವಿಷಯಗಳ ಕುರಿತು ಮಾಹಿತಿ ಮಾರ್ಗದರ್ಶನ ಕೃಷಿ ತಜ್ಞರಿಂದ ದೊರೆಯಲಿದೆ
ಇದಲ್ಲದೆ ಆಹಾರ ಮೇಳ,ಕಲೆ,ಸಂಸ್ಕೃತಿ,ಕ್ರೀಡೋತ್ಸವಗಳು ಈ ಸಂದರ್ಭದಲ್ಲಿ ನಡೆಯಲಿದೆ
ಮಾಹಿತಿಗೆ 9008444644, 9980743365.