spot_img
Sunday, December 22, 2024
spot_imgspot_img
spot_img
spot_img

ಅಹಾ!…ಇದು ಅಡಿಕೆ ಪೇಯ!: ಇವರು ತಯಾರಿಸ್ತಾರೆ ಅಡಿಕೆಯ ವಿವಿಧ ಸ್ವಾದಿಷ್ಟಕರ ಪೇಯ!

-ರಾಧಾಕೃಷ್ಣ ತೊಡಿಕಾನ

ಅಡಿಕೆ ಎಂದ ಕೂಡಲೇ ಕವಳದ ನೆನಪಾಗುತ್ತದೆ. ಊಟವಾದ ಮೇಲೆ ಕವಳ ಹಾಕಿಕೊಳ್ಳುವುದು ಸಂಪ್ರದಾಯ. ಅಡಿಕೆ ಜಗಿದು ಉಗಿಯುವುದಕ್ಕೆ ಮಾತ್ರ ಸೀಮಿತವಾದುದಲ್ಲ. ಅದರಲ್ಲಿಯೂ ಔಷಧಿಯ ಗುಣಗಳಿವೆ. ಮೌಲ್ಯವರ್ಧನೆಗೆ, ಉಪ ಉತ್ಪನ್ನಗಳಿಗೆ ಪೂರಕವಾದ ಸಂಪನ್ಮೂಲಗಳಿವೆ.

ಅಡಿಕೆ ದರ ಕುಸಿದು ಬೆಳೆಗಾರರು ಕಂಗಾಲಾದಾಗ ಅಡಿಕೆಯ ಬೇರೆ ಬೇರೆ ಸಾಧ್ಯತೆಗಳನ್ನು ಕಂಡುಕೊಳ್ಳಲು ಅಡಿಕೆ ಬೆಳೆಗಾರರು ಕೆಲವು ಪ್ರಯೋಗ ಮಾಡಿದರು. ಅವುಗಳಲ್ಲಿ ಕೆಲವೊಂದು ಮಾರುಕಟ್ಟೆಯಲ್ಲಿ ಸದ್ದುಮಾಡಿತು. ಕೆಲವು ಸಂಶೋಧನೆಯಲ್ಲಿ ಕೊನೆಯಾಯಿತು. ಅಡಿಕೆಯ ತಂಪು ಪಾನೀಯ, ಚಹಾ, ಸಾಂಬಾರು ಪುಡಿ ಮೊದಲಾದ ಪ್ರಯೋಗಗಳನ್ನು ಕೆಲವರು ಮಾಡಿದರು. ಕೆಲವರು ಅದರಿಂದಲೇ ಹೆಸರುವಾಸಿಯಾದರು..

“ಅಡಿಕೆಯನ್ನು ಕೇವಲ ತಿನ್ನೋದಲ್ಲ. ಒಮ್ಮೆ ಕುಡಿದು ನೋಡಿ” ಎಂಬ ಘೋಷವಾಕ್ಯದೊಂದಿಗೆ “ಓಜಾಸ್” ಎಂಬ ಅಡಿಕೆಯ ಆರೋಗ್ಯಕರ ಪೇಯ ಮಾರುಕಟ್ಟೆಗೆ ಪರಿಚಿತವಾಗಿದ್ದು ಆ ಪೇಯವನ್ನು ಬಿಸಿಯಾಗಿ ಹಾಗೂ ತಂಪಾಗಿ ಯಾವುದೇ ರೀತಿಯಲ್ಲಿ ಕುಡಿಯಬಹುದು. ಈ ಪೇಯವನ್ನು ತಯಾರಿಸುತ್ತಿರುವವರು ಸುರೇಶ್ ಎಂ. ಹೆಗ್ಡೆ

ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ಸಮೀಪವಿರುವ ಹುಗ್ಗಿಕೊಪ್ಪ ತೀರಾ ಹಳ್ಳಿ. ಅಡಿಕೆ ಬೆಳೆಗಾರರೇ ಹೆಚ್ಚು. ಹುಗ್ಗಿ ಕೊಪ್ಪದ ಸುರೇಶ್ ಎಂ. ಹೆಗ್ಡೆಯವರು ಕೂಡ ಅಡಿಕೆ ಬೆಳೆಗಾರರು. ತಲೆತಲೆತಲಾಂರಗಳಿಂದ ಅಡಿಕೆಯನ್ನು ನೆಚ್ಚಿಕೊಂಡವರು. ಅದರಿಂದಲೇ ಬದುಕು ಕಟ್ಟಿಕೊಂಡವರು. ಅಡಿಕೆಯ ಏಳುಬೀಳುಗಳನ್ನು ಕಂಡವರು. ಅದರೊಂದಿಗೆ ಅವರೂ ಕಷ್ಟ ಸುಖಗಳನ್ನು ಅನುಭವಿಸಿದವರು.

ಅಡಿಕೆ ಹಿಂದಿನ ದಿನಗಳಲ್ಲಿ ಪ್ರಮಾಣ ಕಡಿಮೆಯಿತ್ತು. ಆಹಾರ ಬೆಳೆ ಪ್ರದೇಶ ಕಡಿಮೆಯಗಿ ಅಡಿಕೆ ಬೆಳೆ ಹೆಚ್ಚಾಯಿತು. ಅಡಿಕೆ ಬೆಳೆಯ ಬೆಲೆಯ ಏರುಪೇರುಗಳು ಎಂದಾದರೂ ಅಪಾಯವನ್ನು ತಂದೊಡ್ಡುವಂತಹದ್ದೇ. ಅದನ್ನು ಸುರೇಶ್ ಎಂ. ಹೆಗ್ಡೆಯವರು ಮನಗಂಡಿದ್ದರು. ಅಡಿಕೆಯಿಂದ ಏನಾದರೂ ಉಪ ಉತ್ಪನ್ನಗಳನ್ನು ತಯಾರಿಸಬೇಕೆಂಬ ಆಲೋಚನೆ ಅವರಿಗೆ ಹೊಳೆಯಿತು.

೨೦೦೫ರಲ್ಲಿ ಅಡಿಕೆ ಪೇಯ ತಯಾರಿಸುವತ್ತ ಮುಂದಾದರು. ಅಡಿಕೆಯ ಚಾ-ಪೇಯ ತಯಾರಿಸಿ ಜನರನ್ನು ಜನರ ಬಳಿಗೆ ಕೊಂಡೊಯ್ದರು. ಕಾರಣಾಂತರದಿಂದ ಹಿನ್ನಡೆಯಾಯಿತು. ಹಾಗಂತ ತನ್ನ ಪ್ರಯೋಗಗಳನ್ನು ಕೈಬಿಟ್ಟು ಸುಮ್ಮನೆ ಕುಳಿತುಕೊಳ್ಳಲಿಲ್ಲ. ಮತ್ತೆ ಮತ್ತೆ ಅಡಿಕೆ ಪೇಯ ತಯಾರಿಸಿ ಮಾರುಕಟ್ಟೆಗೆ ಪರಿಚಯಿಸುತ್ತಲೇ ಬಂದರು. ಜನರಿಂದ ಉತ್ತಮ ಪ್ರತಿಕ್ರಿಯೆ ಬಂತು .ಇದರಿಂದ ಸುರೇಶ ಹೆಗ್ಡೆಯವರು ಉತ್ತೇಜಿತರಾದರು. ೨೦೧೯ ರಿಂದ ತ್ರಿಶೂಲ್ ಕಂಪೆನಿ ಹುಟ್ಟು ಹಾಕಿ “ಓಜಾಸ್” ಎಂಬ ಹೆಸರಿನಡಿ ಅಡಿಕೆಯ ಪೇಯ ಉತ್ಪಾದನೆಯನ್ನು ಹೆಚ್ಚಿಸಿದರು.

ಈಗ ಅವರ ಪುತ್ರ ಅವಿನಾಶ ಹೆಗ್ಡೆ ಅವರೊಂದಿಗೆ ಕೈ ಜೋಡಿಸಿದ್ದಾರೆ. ಅವಿನಾಶ ಹೆಗ್ಡೆ ತನ್ನ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಅನಿಮೇಷನ್ ಡಿಸೈನರ್ ಆಗಿ ಪಟ್ಟಣದಲ್ಲಿ ಉದ್ಯೋಗದಲ್ಲಿದ್ದರು. ಉತ್ತಮ ವೇತನವು ಇತ್ತು. ತನ್ನ ಉದ್ಯೋಗವನ್ನೇ ಬಿಟ್ಟು ಬಂದು ಅಡಿಕೆಯ ಪೇಯ ಕಂಪೆನಿ ಅಭಿವೃದ್ಧಿ ಯತ್ತ ಆಸಕ್ತಿ ವಹಿಸಿದ್ದರು. ಕಂಪೆನಿಯ ಮುಖ್ಯ ಕಾರ್ಯನಿವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅಡಿಕೆ ಪ್ರೀಮಿಯರ್, ಅಡಿಕೆ ಚಾಕಲೇಟ್, ಅಡಿಕೆ ಕಾಜು, ಅಡಿಕೆ ವೆನಿಲ್ಲಾ ಮೊದಲಾದ ಪೇಯಗಳು ತಯಾರಾದವು. ರಾಸಾಯನಿಕ ಮುಕ್ತವಾದ ಸಾವಯುವ ಕೃಷಿಯಿಂದಲೇ ಬೆಳೆಸಿದ ಚಾಲಿ ಅಡಿಕೆಯಿಂದ ಈ ಉತ್ಪನ್ನಗಳನ್ನು ತಯಾರಿಸುತ್ತಾರೆ. ಇದರಿಂದ ಅಡಿಕೆಯ ಮೌಲ್ಯವರ್ಧನೆಯಾಗುತ್ತದೆ. ಆರೋಗ್ಯ ದೃಷ್ಟಿಯಿಂದ ಉತ್ತಮ ಪೇಯವಾಗುತ್ತದೆ.

ಆಕರ್ಷಕ ಪ್ಯಾಕೆಟ್‌ನಲ್ಲಿರುವ ನೂರು ಗ್ರಾಂ ಪೇಯ ಪುಡಿಯನ್ನು ದಿನಕ್ಕೆೆರಡು ಬಾರಿ ಕುಡಿದರೆ ೫೦ ದಿನಗಳ ಕಾಲ ಉಪಯೋಗಿಸಬಹುದು. ಒಂದು ಕಪ್‌ಗೆ ಒಂದು ಗ್ರಾಂ ಪುಡಿಯನ್ನು ಹಾಕಿದರೆ ಸಾಕು. ಬಿಸಿ ಅಥವಾ ತಂಪು ಪಾನೀಯ ತಯಾರಿಸಿಕೊಳ್ಳಬಹುದು. ಈ ಪೇಯದಲ್ಲಿ ಆಯುರ್ವೇದಿಯ ಗುಣಗಳು ಇರುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸಿ ಆರೋಗ್ಯವರ್ಧನೆಗೆ ಸಹಕಾರಿಯಾಗುತ್ತದೆ. ಉತ್ತಮ ರೋಗ ನಿರೋಧಕ. ಆರೋಗ್ಯ ವರ್ಧನೆಗೆ ಸಹಕಾರಿಯಾಗುತ್ತದೆ. ಅಡಿಕೆ ಆಹಾರವಾಗಬೇಕು. ಆಗ ಆಹಾರ-ಆರ್ಥಿಕತೆ ಬೆಳೆಯುತ್ತದೆ. ಹಿಂದೆ ಅಡಿಕೆ ಪೇಯವನ್ನು ನೋಡುವ ದೃಷ್ಟಿಕೋನ ಬೇರೆ ಇತ್ತು. ಈಗ ಹಾಗಿಲ್ಲ. ಅಡಿಕೆ ಪೇಯವನ್ನು ಜನರು ಸ್ವೀಕಾರ ಮಾಡಿದ್ದಾರೆ ಎನ್ನುತ್ತಾರೆ ಸುರೇಶ್ ಹೆಗ್ಡೆ.

ಅಡಿಕೆ ಬೆಳೆಗಾರರು ಅಡಿಕೆಯನ್ನು ಬೆಳೆದು ಮಾರುಕಟ್ಟೆಗೆ ನೀಡಿದರೆ ನಮ್ಮ ನಿರೀಕ್ಷೆಯ ಬೆಲೆ ಸಿಗಲಾರದು. ಹೀಗೆ ಮೌಲ್ಯವರ್ಧನೆ ಗೊಳಿಸಿದರೆ ಒಂದಷ್ಟು ಆದಾಯವನ್ನು ತಂದುಕೊಡಬಹುದು. ರೈತರು ಮತ್ತು ಗ್ರಾಹಕರ ನೇರ ಸಂಪರ್ಕದಿAದ ಅನುಕೂಲವಾಗುತ್ತದೆ. ಅಡಿಕೆಯ ಪೇಯ ಸ್ವಾದಿಸಿದ ಜಗದೀಶ್ ಕರ್ಜೆ ಹೇಳುತ್ತಾರೆ.

ಅಡಿಕೆಯ ಉತ್ಪನ್ನಗಳು ಆಹಾರವಾಗಿ ಬಳಕೆ ಆದರೆ ಬೆಳೆಗಾರರಿಗೆ ಒಂದಿಷ್ಟು ಲಾಭ ತಂದುಕೊAಡಬಲ್ಲದು. ಈ ಉತ್ಪನ್ನಗಳು ಅಮೆಜಾನಿನಲ್ಲಿ ಲಭ್ಯವಿದೆ. ನೇರ ಮಾರುಕಟ್ಟೆಯ ಸೌಲಭ್ಯವಿದೆ.

ಮಾಹಿತಿಗೆ ಮೊ.,   9449453797, 888414319

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group