-ಡಾ| ಎಂ.ಜಿ. ಬಸವರಾಜ
ಚರ‍್ರಿ ಹಣ್ಣು ಸಣ್ಣದಾಗಿದ್ದು ಮೃದುವಾಗಿಯೂ ಮತ್ತು ದುಂಡಾಗಿಯೂ ಇರುವ ಹಣ್ಣು. ಚರ‍್ರಿ ಹಣ್ಣು ಕಪ್ಪಗೆ ಇರುವ ಮತ್ತು ಕೆಂಪಾದ ಬಣ್ಣವನ್ನು ಹೊಂದಿರುತ್ತದೆ. ಈ ಹಣ್ಣಿನಲ್ಲಿ ಬಹಳಷ್ಟು ವಿಟಮಿನ್‌ಗಳು ಮತ್ತು ಜೀವ ರಕ್ಷಕ ಖನಿಜಾಂಶಗಳು ಅಡಕವಾಗಿವೆ. ಟರ್ಕಿ, ಚಿಲಿ, ರಷ್ಯಾ, ಅಮೆರಿಕ ದೇಶಗಳಲ್ಲಿ ರೈನಿಯರ್, ಲ್ಯಾಪಿನ್ಸ್, ಬಿಂಗ್ ಪ್ರಭೇದದ ಚೆರಿ ಹಣ್ಣುಗಳನ್ನು ಬೆಳೆಯುತ್ತಿದ್ದು ಈ ಪ್ರಭೇದದ ಹಣ್ಣುಗಳು ಬಹಳಷ್ಟು ಸಿಹಿಯಾಗಿವೆ ಮತ್ತು ಖಂಡವನ್ನು ಹೊಂದಿವೆ. ಅಮೆರಿಕಾದ ಟ್ರಾರ‍್ಸ್ ನಗರವು ಚರ‍್ರಿ ಹಣ್ಣಿನ ರಾಜಧಾನಿ ಎಂಬ ಖ್ಯಾತಿಯನ್ನು ಪಡೆದಿದೆ. ಇಲ್ಲಿ ಚರ‍್ರಿ ಹಣ್ಣಿನ ಸುಗ್ಗಿಯಲ್ಲಿ ಚರ‍್ರಿ ಹಬ್ಬವನ್ನು ಏರ್ಪಡಿಸಲಾಗುತ್ತದೆ.
ಅಮೇರಿಕಾದ 26 ನೇ ರಾಜ್ಯವಾದ ಮಿಚಿಗಂನ್, ಆ ದೇಶದಲ್ಲಿ ನೀಲಿ ಬಣ್ಣದ ಚೆರಿ ಹಣ್ಣನ್ನು ಅತೀ ಹೆಚ್ಚು ಪ್ರಮಾಣದಲ್ಲಿ ಬೆಳೆಯುತ್ತಾರೆ. ಮಿಚಿಗನ್ ರಾಜ್ಯವು ಮೇಲ್ಮೆ ಮತ್ತು ಕೆಳಭಾಗದ ದೀಪ ಪ್ರದೇಶವಾಗಿದ್ದು ಸುತ್ತಲೂ ದೊಡ್ಡ ಪ್ರಮಾಣದ ಜಲರಾಶಿಯನ್ನು ಹೊಂದಿದೆ. ತಂಪಾದ ಹವಾಮಾನ ಮತ್ತು ಫಲವತ್ತತೆಯ ಭೂಮಿ ಇಲ್ಲಿ ಇರುವುದರಿಂದ ಸ್ವಾದಿಷ್ಟ ಚರ‍್ರಿ ಹಣ್ಣು ಇಲ್ಲಿ ಬೆಳೆದು ಬೇರೆ ಬೇರೆ ಕಡೆ ರವಾನೆಯಾಗುತ್ತದೆ. ಅಮೇರಿಕಾದ ಮೂರನೇ ದೊಡ್ಡ ರಾಜ್ಯವಾದ ಮತ್ತು ಅತಿಹೆಚ್ಚಿನ ಜನಸಂಖ್ಯೆ ಹೊಂದಿರುವ ಕ್ಯಾಲಿಫೋರ್ನಿಯ ರಾಜ್ಯಕ್ಕೆ ಸ್ಪೆöÊನ್ ದೇಶದ ರೈತರು ಚರ‍್ರಿ ಹಣ್ಣನ್ನು ಪರಿಚಯಿಸಿದರು.
ಬ್ರಿಟಿಷ್ ವಸಾಹತುದಾರರು ಚರ‍್ರಿ ಗಿಡಗಳನ್ನು ಅಮೆರಿಕಕ್ಕೆ ತಂದು ಬೆಳೆಸಿದರು. ಇಂದು ಚರ‍್ರಿ ಹಣ್ಣನ್ನು ಪ್ರಪಂಚದ ವಿವಿಧ ದೇಶಗಳಲ್ಲಿ ಬೆಳೆಯಲು ಪ್ರಾರಂಭಿಸಿವೆ. ಭಾರತದ ಕಾಶ್ಮೀರದ ಕಣಿವೆ ಪ್ರದೇಶಗಳಲ್ಲಿ ಪ್ರಗತಿಪರ ರೈತರು, ರೈತ ಉದ್ಯಮಿ ಚರ‍್ರಿ ಹಣ್ಣನ್ನು ಬೆಳೆಯಲು ಪ್ರಾರಂಭಿಸಿದ್ದಾರೆ.
ಒಂದು ಕಪ್ ಚರ‍್ರಿ ಹಣನ್ನು ಅದರ ಸುಗ್ಗಿಯ ಕಾಲದಲ್ಲಿ ತಿಂದರೆ ತನುಮನಗಳಿಗೆ ಹಿತವೆನಿಸುತ್ತದೆ. ಇದರ ತಿರುಳನ್ನು ಕೆಲವರು ಮೆಸೊಕರ‍್ಪ್ ಎಂದು ಕರೆಯುತ್ತಾರೆ. ಈ ಹಣ್ಣು ತೆಳ್ಳಗಿನ ಸಿಪ್ಪೆ, ಸಮೃದ್ಧ ಖಂಡ ಗಟ್ಟಿಯಾದ ಬೀಜ ಹೊಂದಿರುತ್ತದೆ. ಪೀಚಸ್, ವಾಲ್‌ನಟ್, ಪ್ಲಮ್ಸ್, ಬಾದಮಿ, ಮಾವಿನ ಹಣ್ಣು, ಆಲಿವ್ಸ್, ನೆಲ್ಲಿಕಾಯಿ, ಅವಕಾಡೊ ಹಣ್ಣುಗಳಂತೆ ಒಳಗಡೆ ಗಟ್ಟಿಯಾದ ಬೀಜ ಹೊಂದಿರುತ್ತದೆ. ಕೆಲವು ದೇಶಗಳ ಹಳ್ಳಿಗಾಡಿನ ಜನರು ಚರ‍್ರಿ ಹಣ್ಣನ್ನು ‘ಕಲ್ಲಿನ ಹಣ್ಣು’ ಎಂದು ಕರೆಯುತ್ತಾರೆ. ಇದರ ಬೀಜ ಕಲ್ಲಿನಂತೆ ಗಟ್ಟಿಯಾಗಿರುವುದರಿಂದ ಈ ಹೆಸರು ಬಂದಿದೆ. ಸುತ್ತಲೂ ತಿನ್ನುವ ಖಂಡವಿದ್ದು ಒಳಗಡೆ ಬೀಜವಿರುವ ಈ ಹಣ್ಣನ್ನು ಡ್ರೂಪ್ ಜಾತಿಯ ಹಣ್ಣು ಎಂದು ಕರೆಯುತ್ತಾರೆ.
ಚರ‍್ರಿ ಹಣ್ಣಿನಲ್ಲಿ ರಾಶಿ ರಾಶಿ ವಿಟಮಿನ್‌ಗಳು, ಖನಿಜಾಂಶಗಳು ತುಂಬಿಕೊಂಡಿವೆ. ಅಂತೊಸಿಯಾನಿನ್ ಎಂಬ ಪೋಷಕ ಅಂಶದ ಬಹಳ ಒಳ್ಳೆಯ ಮೂಲ ಚರ‍್ರಿ ಹಣ್ಣು. ಇದರಿಂದ ಈ ಹಣ್ಣು ಕೆಂಪು, ನೀಲಿ ಬಣ್ಣದಿಂದ ಹೊಳೆಯುತ್ತದೆ. ಆಂತೊಸಿಯಾನಿನ್ ಉತ್ಕರ್ಷಕ ನಿರೋಧ, ಆ್ಯಂಟಿ ಆಕ್ಸಿಡೆಂಟ್ ಶಕ್ತಿಯನ್ನು ನೀಡುತ್ತದೆ. ಚರ‍್ರಿ ಹಣ್ಣು ದೇಹಕ್ಕೆ ಸೂಕ್ತ ತಂಪು ಮತ್ತು ಹಿತ ನೀಡುತ್ತದೆ ಒಳ್ಳೆಯ ನಿದ್ರೆಗೆ ಸಹಾಯ ಮಾಡುತ್ತದೆ. ಹೃದಯ-ಸ್ನೇಹಿ ಹಣ್ಣು ಇದಾಗಿದೆ.
ಹೃದಯದ ಸುತ್ತಲಿನ ಕೋಶಗಳಿಗೆ ಪುಷ್ಠಿ ನೀಡುತ್ತದೆ. ಕೆಟ್ಟ ಆಹಾರ ಸೇವನೆಯಿಂದ ಉರಿಯೂತ ಉಂಟಾದಾಗ ಇದರ ರಸ ಸೇವನೆ ದೇಹ ಆಹ್ಲಾದಕರವಾಗುವಂತೆ ಮಾಡುತ್ತದೆ. ದೇಹದಲ್ಲಿ ಸಂಗ್ರಹವಾಗುವ ಅಪಾಯಕಾರಿ ಅಂಶಗಳನ್ನು ಹೊರದೋಗಿಸಿ ದೇಹ ಶುದ್ದಿ ಮಾಡುತ್ತದೆ. ಇದರ ಪೋಷಕ ವೃದ್ಧಿ ನಾರು ಪದಾರ್ಥವು ಜೀರ್ಣಾಂಗಗಳಿಗೆ ಸಹಕಾರಿಯಾಗಿದೆ. ದಣಿದ ದೇಹಗಳಿಗೆ ಮರು ಚೈತನ್ಯ ನೀಡುತ್ತದೆ ಆಹಾರ ರುಚಿ ಗ್ರಹಿಕೆಗೆ ಹಿತಕಾರಿ. ಪೋಷಕಾಂಶಗಳ ಬಗೆಗೆ ಹೇಳುವುದಾದರೆ ಇದರಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಷಿಯಂ, ಯಥೇಚ್ಛವಾಗಿ ಒಳಗೊಂಡಿದೆ.
ಚರ‍್ರಿ ಹಣ್ಣು ಬೆಳೆಯುವ ದೇಶಗಳಲ್ಲಿ ಆ ದೇಶಗಳ ಸಂಸ್ಕೃತಿ, ಸಿಹಿ ನೆನಪುಗಳು, ಸುಖ ಸಂತಸಗಳ ಪ್ರತೀಕವಾಗಿ ಇದನ್ನು ಗುರುತಿಸಲಾಗಿದೆ. ಈ ಹಣ್ಣನ್ನು ಊಟಕ್ಕೆ ಮುಂಚೆ, ಊಟದ ನಂತರ ತಿನ್ನುತ್ತಾರೆ. ಜ್ಯೂಸ್, ಐಸ್ ಕ್ಯಾಂಡಿ, ಐಸ್ ಕ್ರೀಮ್, ಚಾಕಲೇಟ್, ಕೇಕ್, ಜಾಮ್, ಫ್ರೂಟ್ ಸಲಾಡ್‌ಗಳನ್ನು ತಯಾರಿಸಿಕೊಂಡು ಸವಿಯುತ್ತಾರೆ. ಒಣಗಿದ ದ್ರಾಕ್ಷಿಯಂತೆಯೂ ತಿನ್ನಬಹುದು. ಬೆಳಗಿನ ಉಪಹಾರವಾಗಿ ಸೇವಿಸಬಹುದು. ಆಹಾರ ವೈವಿಧ್ಯತೆಗೆ ಸಹಾಯಕವಾಗುತ್ತದೆ.
ಟರ್ಕಿ ದೇಶವೂ ಜಗತ್ತಿನಲ್ಲಿ ಹೆಚ್ಚು ಚರ‍್ರಿ ಹಣ್ಣನ್ನು ಬೆಳೆದು ಬೇರೆ ದೇಶಗಳಿಗೆ ರಫ್ತು ಮಾಡುತ್ತಿದೆ. ಉತ್ತರ ಟರ್ಕಿ ಪ್ರದೇಶದಲ್ಲಿ ಬೆಳೆಯುವ ಚರ‍್ರಿ ಹಣ್ಣು ಬಹಳ ಮೃದು ಮತ್ತು ಸಿಹಿಯಾಗಿರುತ್ತದೆ. ಯೂರೋಪ್ ರಾಷ್ಟ್ರಗಳಲ್ಲಿ ಸಿಗುವ ಹಣ್ಣು ಟರ್ಕಿಯಿಂದಲೂ ಬರುತ್ತದೆ. ಟರ್ಕಿ ಚರ‍್ರಿ ಹಣ್ಣುಗಳು ವೈವಿಧ್ಯತೆಯಿಂದ ಕೂಡಿದ್ದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅವುಗಳಿಗೆ ಬಹಳ ಬೇಡಿಕೆ ಇದೆ.
ಪರಿಸರ ವೈವಿಧ್ಯತೆ ಮತ್ತು ಉನ್ನತಮಟ್ಟದ ಫಲವತ್ತುತೆಯ ಭೂಮಿ ಹೊಂದಿರುವ ಕಾರಣದಿಂದ ಮತ್ತು ಹೆಚ್ಚಿನ ಭೂ ಪ್ರದೇಶ ಚರ‍್ರಿ ಬೆಳೆಯುವ ಕಾರಣದಿಂದ ಜಗತ್ತಿನಲ್ಲಿ ಚರ‍್ರಿ ಹಣ್ಣಿನ ಉತ್ಪಾದನೆಯಲ್ಲಿ ಟರ್ಕಿ ಅಗ್ರಸ್ಥಾನ ಪಡೆದುಕೊಂಡಿದೆ. ಅಲ್ಲಿನ ಹವಾಮಾನ ಮತ್ತು ನೀರಿನ ಗುಣಮಟ್ಟ ಚರ‍್ರಿ ಬೆಳೆಯಲು ಬಹಳ ಸೂಕ್ತವಾಗಿದೆ. ಹಾಗಾಗಿ ಟರ್ಕಿಯ ಚರ‍್ರಿ ಹಣ್ಣು ಉತ್ಪಾದನೆಯಲ್ಲಿ ನೈಸರ್ಗಿಕ ಉತ್ಪಾದನಾ ದತ್ತಿಯನ್ನು ಹೊಂದಿದೆ.
ಕರ್ನಾಟಕದ ರೈತರು ಸಹ ಅತ್ಯುತ್ತಮ ಚರ‍್ರಿ ಹಣ್ಣು ಬೆಳೆಯಬಹುದು. ಅಡಿಕೆ ತೋಟಗಳಲ್ಲಿ ಬೇಕಾದಷ್ಟು ಬಿಡುವು ಭೂಮಿ ಸಿಗುತ್ತದೆ. ಈ ಖಾಲಿ ಭೂಮಿಯಲ್ಲಿ ಚರ‍್ರಿ ಗಿಡಗಳನ್ನು ಬೆಳೆಸಬಹುದು. ಅಡಿಕೆ ಗಿಡಗಳು ಎತ್ತರವಾಗಿ ಬೆಳೆದು ವಾಣಿಜ್ಯ ಲಾಭ ನೀಡುತ್ತದೆ. ಚರ‍್ರಿ ಗಿಡಗಳಿಗೆ ಕುರಿ ಗೊಬ್ಬರ, ದನಕರುಗಳ ಗೊಬ್ಬರ, ಬೆಳೆ ಬೆಳೆದಿರದ ಹೊಸ ಮಣ್ಣು, ಸಣ್ಣ ಸಣ್ಣ ಫುಲ್ ಕಲ್ಲುಗಳ ರಾಶಿ, ಫ್ಯಾಮಿಲಿನಲ್ಲಿ ದೊರೆಯುವ ಮರದ ಪುಡಿಗಳನ್ನು ಹಾಕಿದರೆ ಹಾಗೂ ಯುಕ್ತವಾಗಿ ನೀರು ನೀಡಿದರೆ ಭೂಮಿ ಫಲವತ್ತತೆ ಅಗಾಧವಾಗಿ ಹೆಚ್ಚುತ್ತದೆ. ರಾಶಿ ರಾಶಿ ಹಣ್ಣುಗಳ ಉತ್ಪಾದನೆಯಾಗುತ್ತವೆ. ಅಡಿಕೆ ತೋಟಗಳಲ್ಲಿ ಅನಗತ್ಯ ಕಳೆ ಬೆಳೆಯುವುದಿಲ್ಲ.
ತೋಟಕ್ಕೆ ಹೋದಾಗ ಚೆರಿ ಹಣ್ಣು ತಿನ್ನಲು ಮನ ಮಂದಿಗೆ ದೊರೆಯುತ್ತದೆ. ಎಲೆಗಳು ಉದುರಿ ಕ್ರಿಮಿಕೀಟಗಳಿಗೆ ತಿನ್ನಲು ಯತೇಚ್ಛ ಆಹಾರ ದೊರೆಯುತ್ತದೆ. ಭೂಮಿಯು ಬೇರುಗಳಿಂದ ಕೂಡಿ ಕೂಡಿದ್ದು ಎರೆಹುಳುಗಳು ಇತರೆ ಮೈಕ್ರೊಬ್ ಹುಳು ಹುಪ್ಪಟೆಗಳು ವೃದ್ಧಿಗೊಂಡು ಫಲವತ್ತತೆ ನಿರಂತರವಾಗಿ ಹೆಚುತ್ತದೆ. ಪಕ್ಷಿಗಳು ತೋಟಕ್ಕೆ ಬಂದು ಅಪಾಯಕಾರಿ ಕೀಟಗಳನ್ನು ಬೆಳವಣಿಗೆ ನಿಯಂತ್ರಿಸುತ್ತವೆ. ಉಪಕಾರಿ ತರಕಾರಿ ಸೊಪ್ಪುಗಳು ನೈಸರ್ಗಿಕವಾಗಿ ಬೆಳೆಯಲು ಆ ಪಕ್ಷಿಗಳು ಸಹಕಾರಿ. ಜಗತ್ತಿನ ಉತ್ತಮ ಪರಿಸರಕ್ಕೆ ಇದೆಲ್ಲಾ ಸಹಾಯಕವಾಗುತ್ತದೆ. ರೈತರ ಜೀವನ ಮಟ್ಟ ಹೆಚ್ಚುತ್ತದೆ