ಬಾಗಲಕೋಟ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯದಲ್ಲಿ ತೋಟಗಾರಿಕೆ, ಕೃಷಿ ಹಾಗೂ ಸಂಬಂಧಿತ ಅಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ತೋಟಗಾರಿಕಾ ಮೇಳವು ಡಿಸೆಂಬರ್ 21ರಿಂದ ಡಿಸೆಂಬರ್ 23ರ ವರೆಗೆ ಉದ್ಯಾನಗಿರಿಯಲ್ಲಿರುವ ವಿ.ವಿ ಆವರಣದಲ್ಲಿ ನಡೆಯಲಿದೆ
ಆರ್ಥಿಕತೆ ಹಾಗೂ ಪೌಷ್ಠಿಕತೆಗಾಗಿ ತೋಟಗಾರಿಕೆ ಎಂಬ ಆಶಯದೊಂದಿಗೆ ಮೂರು ದಿನಗಳ ಕಾಲ ಈ ತೋಟಗಾರಿಕಾ ಮೇಳವನ್ನು ಹಮ್ಮಿಕೊಳ್ಳಲಾಗಿದೆ
ಪೌಷ್ಠಿಕತೆಗಾಗಿ ತೋಟಗಾರಿಕಾ ಬೆಳೆಗಳು, ಸಸ್ಯ ಸಂರಕ್ಷಣೆಯಲ್ಲಿ ಡ್ರೋನ್ ಗಳ ಬಳಕೆ, ತೋಟಗಾರಿಕೆಯಲ್ಲಿ ನಿಖರ ಬೇಸಾಯ, ಆರ್ಥಿಕತೆಗಾಗಿ ಪರ್ಯಾಯ ಬೆಳೆಗಳ ಆಯ್ಕೆ, ಸಾಯುವ ಕೃಷಿಯಲ್ಲಿ ಹಣ್ಣಿನ ಬೆಳೆಗಳು, ದ್ರಾಕ್ಷಿ ತಳಿಗಳ ಪ್ರಾತ್ಯಕ್ಷಿಕೆ,ಔಷಧಿ ಮತ್ತು ಸುಗಂಧ ದ್ರವ್ಯ ಬೆಳೆಗಳ ಪ್ರದರ್ಶನ,ಅರಣ್ಯ ಕೃಷಿ,ಫಲಪುಷ್ಪ ಪ್ರದರ್ಶನ, ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟ ಸೇರಿದಂತೆ ರೈತರು ಉಪಯುಕ್ತವಾದ ಮಾಹಿತಿಗಳು ಈ ತೋಟಗಾರಿಕಾ ಮೇಳದಲ್ಲಿ ಪಡೆಯಬಹುದು