ಮೂಡಿಗೆರೆಯ ಕೃಷಿ ವಿಚಾರ ವಿಜ್ಞಾನ ಕೇಂದ್ರದ ಆವರಣದಲ್ಲಿ ಕೃಷಿ ಮತ್ತು ತೋಟಗಾರಿಕಾ ಮೇಳವು ಡಿಸೆಂಬರ್ 27 ಮತ್ತು 28 ರಂದು ಎರಡು ದಿನಗಳ ಕಾಲ ನಡೆಯಲಿದೆ.
ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿವಿ ಶಿವಮೊಗ್ಗ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಮೂಡಿಗೆರೆ, ಕೃಷಿ ವಿಜ್ಞಾನ ಕೇಂದ್ರ ಹಾಗೂ ತೋಟಗಾರಿಕೆ ಮಹಾವಿದ್ಯಾಲಯ ಮೂಡಿಗೆರೆ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಕಡೆ ಮುಡ್ಕಲ್, ಕೃಷಿ ಹಾಗೂ ಕೃಷಿ ಸಂಬಂಧಿಸಿದ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ಈ ಕೃಷಿ ಮೇಳ ಹಮ್ಮಿಕೊಳ್ಳಲಾಗಿದೆ.
“ಸುಸ್ಥಿರ ಕೃಷಿಗೆ ವಿನೂತನ ತಂತ್ರಜ್ಞಾನಗಳ” ಎಂಬ ವಿಷಯದೊಂದಿಗೆ ನಡೆಯಲಿರುವ ಈ ಕೃಷಿ ಮತ್ತು ತೋಟಗಾರಿಕಾ ಮೇಳದಲ್ಲಿ ಕೃಷಿಯಲ್ಲಿ ಡ್ರೋನ್ ಬಳಕೆ, ಮಾಧ್ಯಮಿಕ ಕೃಷಿ ಮತ್ತು ಬತ್ತದ ಸಾಂಪ್ರದಾಯಿಕ ತಳಿಗಳ ಪ್ರಾತ್ಯಕ್ಷಿಕೆ, ಅಡಿಕೆ ಸಿಪ್ಪೆ ಗೊಬ್ಬರ ತಯಾರಿಕೆ, ವೈಜ್ಞಾನಿಕ ಮೀನು ಕೃಷಿ, ವಿದೇಶಿ ಹಣ್ಣಿನ ಬೆಳೆಗಳ ಪ್ರಾತ್ಯಕ್ಷಿಕೆ, ಹವಮಾನ ಆಧಾರಿತ ಕೃಷಿ, ಜೇನು ಕೃಷಿ,ಕಾಪಿ, ಕಾಳು ಮೆಣಸು ಮತ್ತು ಏಲಕ್ಕಿ ಬೆಳೆಗಳ ಕೃಷಿ, ಪರಿಕರ ಹಾಗೂ ಕೃಷಿ ಯಂತ್ರೋಪಕರಣಗಳ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ