spot_img
Thursday, November 21, 2024
spot_imgspot_img
spot_img
spot_img

ಡಿ.6 ರಿಂದ ಉಳ್ಳಾಲದ ಕೈರಂಗಳದಲ್ಲಿ ರಾಜ್ಯಮಟ್ಟದ ಶಿಕ್ಷಣ ಉದ್ಯೋಗ ಕೃಷಿ ಮೇಳ

ಕೃಷಿ ಕ್ಷೇತ್ರ ಕೋಟ್ಯಾಂತರ ಜನರಿಗೆ ಅನ್ನ ನೀಡುವ ಕ್ಷೇತ್ರ. ದೇಶದಲ್ಲಿ ಬಹುತೇಕ ಕುಟುಂಬಗಳು ಕೃಷಿ ವಲಯವನ್ನೇ ಆಶ್ರಯಿಸಿ ಜೀವನ ನಡೆಸುತ್ತಿವೆ. ಅನಕ್ಷರಸ್ಥರಿಂದ ಅಕ್ಷರಸ್ಥರವರೆಗೆ ಉದ್ಯೋಗ ನೀಡುವ ವಲಯವಿದು. ವಿಪುಲವಾದ ಉದ್ಯೋಗ ಅವಕಾಶ ಈ ಕ್ಷೇತ್ರದಲ್ಲಿದ್ದರೂ ಅವುಗಳ ಸದುಪಯೋಗಕ್ಕೆ ಪೂರಕ ಯೋಜನೆ, ಮಾಹಿತಿ, ರೈತಾಪಿ ವರ್ಗದಲ್ಲಿಲ್ಲ. ಇಂತಹ ಸಂದರ್ಭದಲ್ಲಿ ನಡೆಯುವ ಕೃಷಿ ಮೇಳಗಳು ಕೃಷಿ ಲೋಕ ಹಾಗೂ ಅದರಲ್ಲಿರುವ ಸಾಧ್ಯತೆಗಳನ್ನು ಅನಾವರಣಗೊಳಿಸುವ ಕೆಲಸವನ್ನು ಮಾಡುತ್ತದೆ.

ಆಧುನಿಕ ತಂತ್ರಜ್ಞಾನ, ಯಾಂತ್ರಿಕತೆ, ಕೃಷಿ ಉತ್ಪನ್ನಗಳ ಸಂಸ್ಕರಣೆ, ಗೃಹ ಉದ್ಯಮ-ವ್ಯವಹಾರ ಮೊದಲಾದುವುಗಳನ್ನು ರೈತಾಪಿ ವರ್ಗಕ್ಕೆ ತಿಳಿಸುವ ವೇದಿಕೆಯಾಗಿ ಅವು ಮಾರ್ಪಟ್ಟಿವೆ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗಗಳಲ್ಲಿ ನಡೆಯುವ ಕೃಷಿ ಮೇಳಗಳಿಗೆ ಕೃಷಿಕರಿಂದ ಉತ್ತಮ ಸ್ಪಂದನೆ ದೊರೆತಿದೆ.

ದ.ಕ.ಜಿಲ್ಲೆ ಉಳ್ಳಾಲ ತಾಲೂಕಿನ ಕೈರಂಗಳದ ಶಾರದಾಗಣಪತಿ ವಿದ್ಯಾ ಕೇಂದ್ರವು ಪುಣ್ಯಕೋಟಿ ನಗರದಲ್ಲಿ ಶಿಕ್ಷಣ ಉದ್ಯೋಗ ಕೃಷಿ ಮೇಳವನ್ನು ಡಿಸೆಂಬರ್ 6ರಿಂದ 8ರವರೆಗೆ ಮೂರು ದಿನಗಳ ಕಾಲ ಆಯೋಜಿಸಿದೆ. ತೆಕ್ಕುಂಜೆ ಶ್ರೀ ಗಣಪತಿ ಭಟ್ ಚಾರಿಟೇಬಲ್ ಟ್ರಸ್ಟಿನ ಸ್ವಾಮ್ಯಕ್ಕೊಳಪಟ್ಟ ಗ್ರಾಮೀಣ ಭಾಗದಲ್ಲಿರುವ ಶಾರದಾಗಣಪತಿ ವಿದ್ಯಾಕೇಂದ್ರ ಕಳೆದ ಮೂರು ವರ್ಷಗಳಿಂದ ಕೃಷಿಮೇಳ ನಡೆಸಿ. ರೈತಾಪಿ ವರ್ಗದ ಗಮನ ಸೆಳೆದಿತ್ತು. ಕೃಷಿ ಭವಿಷ್ಯತ್ತಿನ ಆದ್ಯತಾ ವಲಯ ಹಾಗೂ ನಿರಂತರ ಉದ್ಯೋಗ ಸೃಷ್ಟಿಯ ಕ್ಷೇತ್ರ. ಅದನ್ನು ಮನಗಂಡು ಈ ಬಾರಿಯೂ ಕೃಷಿ ಮೇಳವನ್ನು ಹಮ್ಮಿಕೊಂಡಿದೆ. ಕೃಷಿ ಮೇಳದಲ್ಲಿ ಕೃಷಿಗೆ ಪೂರಕವಾದ ಯಂತ್ರೋಪಕರಣಗಳು, ತೋಟಗಾರಿಕೆ, ಹೈನುಗಾರಿಕೆ, ಇತರ ಕೃಷಿ ಮಾಹಿತಿಗಳು, ಬೀಜ, ಸಾವಯುವ ಗೊಬ್ಬರಗಳು, ಗೃಹ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ವಿವಿಧ ಖಾದ್ಯಗಳ ಆಹಾರ ಮಳಿಗೆಗಳಿವೆ.

ಗ್ರಾಮೀಣ ಪರಿಸದಲ್ಲಿ ಅಕ್ಷರ ಕ್ರಾಂತಿ ಮಾಡುತ್ತಿರುವ ಈ ವಿದ್ಯಾ ಸಂಸ್ಥೆಯು ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಪೂರಕವಾದ ಮಾಹಿತಿಗಳು, ವಿವಿಧ ಉದ್ಯೋಗ ಆಧಾರಿತ ಹಾಗೂ ವಿಷಯಾಧಾರಿತ ಬೋಧನೆ ಮಾಡುವ ಶಿಕ್ಷಣ ಸಂಸ್ಥೆಗಳನ್ನು ಮತ್ತು ವಿದ್ಯಾರ್ಥಿಗಳನ್ನು ಒಂದೇ ವೇದಿಕೆಗೆೆ ತರುವ ಪ್ರಯತ್ನದೊಂದಿಗೆ ಶಿಕ್ಷಣ ಮೇಳವನ್ನು ಈ ಸಂದರ್ಭದಲ್ಲಿ ಆಯೋಜಿಸಿದೆ ವಿದ್ಯಾಭ್ಯಾಸದ ನಂತರ ಜೀವನೋಪಾಯಕ್ಕೆ ಅನುಕೂಲವಾದ ಉದ್ಯೋಗ ಅನಿವಾರ್ಯ.

ನಗರ ಮತ್ತು ಗ್ರಾಮೀಣ ವಿದ್ಯಾವಂತ ಯುವ ಸಮುದಾಯ ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದೆ. ವಿದ್ಯಾರ್ಹತೆಗೆ ತಕ್ಕುದಾದ ಉದ್ಯೋಗವಿಲ್ಲದೆ ಚಡಪಡಿಸುತ್ತಿರುವ ಈ ಕಾಲಘಟ್ಟದಲ್ಲಿ ಉದ್ಯೋಗ ನೀಡಬಲ್ಲ ಸಂಸ್ಥೆಗಳನ್ನು ಹಾಗೂ ಉದ್ಯೋಗ ಅಪೇಕ್ಷಿತರನ್ನು ಒಂದೆಡೆ ಸೇರಿಸಿ ಉದ್ಯೋಗ ಒದಗಿಸುವ ಪ್ರಯತ್ನವಾಗಿ ಉದ್ಯೋಗ ಮೇಳವನ್ನು ಸಂಯೋಜಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಶಿಕ್ಷಣ ಉದ್ಯೋಗ ಕೃಷಿ ಮೇಳವನ್ನು ಜೊತೆಯಾಗಿ ಸಂಯೋಜಿಸಿರುವುದು ಇದೇ ಪ್ರಥಮವಾಗಿದೆ. ಕೆಲಸವಿಲ್ಲದ ಯುವಕರಿಗೆ ಈ ಉದ್ಯೋಗ ಮೇಳದ ಮಾಹಿತಿ ಹೆಚ್ಚು ಪ್ರಯೋಜನಕಾರಿ ಆಗಲಿದೆ. ಈ ಮೂರೂ ದಿನಗಳಲ್ಲಿ ಸ್ಥಳೀಯ ಹಾಗೂ ರಾಜ್ಯದ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಮಾಹಿತಿಗೆ ಮೊ.6364903821, 6364903822, 

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group