spot_img
Saturday, November 23, 2024
spot_imgspot_img
spot_img
spot_img

ಕೃಷಿಯತ್ತ ವಾಲಿದ ಯುವ ಇಂಜಿನಿಯರ್: ಕೃಷಿಯ ಕನಸು ಫಲ ನೀಡಿದಾಗ!

ಉನ್ನತ ವಿದ್ಯಾಭ್ಯಾಸ, ಉದ್ಯೋಗವೆಂದು ಬಹಳಷ್ಟು ಯುವಕರು ನಗರವನ್ನು ಆಯ್ದುಕೊಳ್ಳತ್ತಾರೆ. ತಮ್ಮ ಮೂಲ ಬೇರುಗಳು ಹಳ್ಳಿಗಳಲ್ಲಿದ್ದರೂ ಆನಂತರ ತಾವು ಬೆಳೆದ ಹಳ್ಳಿಯನ್ನು ಮರೆತು ಬಿಡುತ್ತಾರೆ. ನಗರ ಜೀವನವೇ ಸಹ್ಯವಾಗುತ್ತದೆ. ಕೆಲವು ಮಂದಿಗೆ ತಾವು ಹುಟ್ಟಿ ಬೆಳೆದ ಊರುಗಳತ್ತ ಮರಳಿ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮನಸ್ಸಿದ್ದರೂ ಯಶಸ್ಸಿನ ಭರವಸೆಯಿಲ್ಲ. ನಗರದಲ್ಲಿದ್ದರೂ ಕೃಷಿಯ ತುಡಿತವನ್ನು ಹೆಚ್ಚಿಸಿಕೊಂಡು ಕೃಷಿಯಲ್ಲಿ ಖುಷಿ ಕಾಣಲು ಹೊರಟವರಿದ್ದಾರೆ. ಕೆಲವರು ಕೈಸೋತು ಮತ್ತೆ ನಗರದತ್ತ ಮುಖ ಮಾಡುತ್ತಾರೆ. ಇನ್ನು ಕೆಲವರು ನಗರದಲ್ಲಿ ಇದ್ದುಕೊಂಡೇ ಕೃಷಿಯನ್ನು ನೆಚ್ಚಿಕೊಂಡು ಯಶಸ್ಸಿನ ದಾರಿ ಕಂಡುಕೊಳ್ಳುತ್ತಾರೆ. ಅಂತಹವರಲ್ಲಿ ಮರವಂತೆಯ ರಾಮ್ ಒಬ್ಬರು

ಕೃಷಿಕ ಕುಟುಂಬದವರಾದ ಅವರು ಬಿ.ಇ. ಪದವೀಧರರು. ಉದ್ಯೋಗಕ್ಕಾಗಿ ಬೆಂಗಳೂರು ಸೇರಿದರು. ಯಾಕೋ ಏನೋ ತಾನು ಹುಟ್ಟಿ ಬೆಳೆದ ಹಳ್ಳಿಗಾಡಿನ ಪರಿಸರ, ಪ್ರಶಾಂತ ವಾತಾವರಣ, ಸುತ್ತಮುತ್ತಲಿನ ಕೃಷಿ ಭೂಮಿ ಇವರ ಮನದ ಮೂಲೆಯಿಂದ ಮಾಸಿರಲಿಲ್ಲ. ಆಗಾಗ ಊರಿಗೆ ಬಂದು ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಪರಿಸರ ಪ್ರೀತಿಯನ್ನು ಹೆಚ್ಚಿಸಿಕೊಂಡಿದ್ದರು. ಅಲ್ಲದೆ ತನ್ನ ಹಿರಿಯರಿಂದ ಬಂದ ಭೂಮಿಗೆ ಕಾಯಕಲ್ಪ ನೀಡಬೇಕೆಂಬ ಆಸೆ ಮನದ ಮೂಲೆಯಲ್ಲಿತ್ತು.

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾಡಾ ಗ್ರಾಮದ ಪುಟ್ಟ ಊರಾದ ಚುಂಗಿಗುಡ್ಡೆ ಎಂಬಲ್ಲಿ ಮನೆ ಇದ್ದರೂ ರಾಮ್ ಅವರ ಪಾಲಿಗೆ ಬಂದ ಕೃಷಿ ಭೂಮಿ ಮರವಂತೆಯಲ್ಲಿತ್ತು, ಆ ಜಾಗದಲ್ಲಿ ಇದ್ದುದು ತೆಂಗಿನ ಮರಗಳು. ಅವು ಹಳೆಯ ಮರಗಳಾಗಿದ್ದವು. ಹೆಚ್ಚೇನೂ ಫಲ ಕೊಡುತ್ತಿರಲಿಲ್ಲ. ಆ ಭೂಮಿಯನ್ನು ಹದಗೊಳಿಸಿ ಇದ್ದ ತೆಂಗಿನ ಮರಗಳಿಗೆ ನೀರು ಗೊಬ್ಬರವುಣಿಸಿದರು. 60-70 ತೆಂಗಿನ ಮರಗಳಿದ್ದರೂ ಎರಡು ಮೂರು ವರ್ಷದ ಹಿಂದೆ ವಾರ್ಷಿಕವಾಗಿ 3೦೦೦- 4೦೦೦ ತೆಂಗಿನ ಕಾಯಿಗಳಿಗೆ ಸೀಮಿತವಾಗಿತ್ತು. ರಾಮ್ ಅವರು ಈ ಜಾಗಕ್ಕೆ ಕಾಯಕಲ್ಪ ನೀಡಿದ ಮೇಲೆ ಇಳುವರಿ ದುಪ್ಪಾಟ್ಟಾಯಿತು. ವಾರ್ಷಿಕವಾಗಿ 8೦೦೦-9೦೦೦ ದವರೆಗೆ ಫಲ ನೀಡಿತು. ಹಿಂದೆ ಮರವೊಂದು 5೦-7೦ ಕಾಯಿಗಳನ್ನು ಕೊಡುತ್ತಿದ್ದರೆ ಈಗ 150-15೦ ಹಸಿರು ಕಾಯಿಗಳಿಂದ ತುಂಬಿ ತುಳುಕಿವೆ

ಪುಟ್ಟ ತೋಟದಲ್ಲಿ ಏನೇನಿದೆ

ಇವರು ಹೊಂದಿರುವುದು ಪುಟ್ಟ ತೋಟ. ಸುಮಾರು ಮುಕ್ಕಾಲು ಎಕ್ರೆಯಷ್ಟಿರುವ ಈ ಜಾಗ ತೆಂಗಿನ ತೋಟಕ್ಕಷ್ಟೇ ಸೀಮಿತಗೊಳಿಸಿಲ್ಲ. ಮಿಶ್ರ ಬೆಳೆಗಳಿಗೆ ಆದ್ಯತೆ ನೀಡಿದ್ದಾರೆ. ಮಾವು, ಹಲಸು, ಸೀತಾಫಲ, ನೆಲ್ಲಿಕಾಯಿ, ಕೋಕಂ (ಪುನರ್ಪುಳಿ), ಜಾಯಿಕಾಯಿ, ಅಮಟೆಕಾಯಿ, ಬಟರ್ ಫ್ರುಟ್, ಮೈಸೂರ ನೇರಳೆ, ದೇವಲಸು, ಫೀನಟ್, ಮುಸಂಬಿ, ಮೆಕಡೋಮಿಯ, ಚಿಕ್ಕು,ಮೂರು ನಾಲ್ಕು ವಿಧದ ಬಾಳೆ ಸೇರಿದಂತೆ ೨೫ಕ್ಕೂ ಹೆಚ್ಚಿನ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ನೆಟ್ಟಿದ್ದಾರೆ. ಇವೆಲ್ಲವೂ ಮಾರಾಟ-ಆದಾಯದ ದೃಷ್ಟಿಕೋನದಿಂದಲೇ ಮಾಡಿಲ್ಲವಾದರೂ ಇದ್ದ ಜಾಗವನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರ ಬಗ್ಗೆ ಅವರು ಗಮನ ಹರಿಸಿದ್ದಾರೆ. ಈಗ ಸಾವಯುವ ಹಾಗೂ ರಾಸಾಯನಿಕ ಗೊಬ್ಬರ ನೀಡಿ ಕೃಷಿ ಮಾಡುತ್ತಿದ್ದರೆ ಜೀವಾಮೃತವನ್ನು ಬಳಸಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ತನ್ನ ಭೂಮಿಯನ್ನು ಸಾವಯುವ ಕೃಷಿಗೆ ಪರಿವರ್ತಿಸುವ ಆಶಯ ರಾಮ್ ಅವರದು. ಕಳೆಗಳನ್ನು ತೋಟದಲ್ಲಿ ಮಲ್ಚಿಂಗ್ ಮಾಡುವುದು ಅವರ ಉದ್ದೇಶ. ಈಗ ಬೆಂಗಳೂರಿಂದ 15 ದಿನಕ್ಕೊಮ್ಮೆ ಊರಿಗೆ ಬಂದು ಕೃಷಿಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಆಸೆ ಅವರಾದಾಗಿದೆ. ಕೃಷಿ ಪಂಡಿತ ಪ್ರಸಾದ ರಾಮ ಹೆಗಡೆ ಅವರಿಂದ ಮಾಹಿತಿ ಮಾರ್ಗದರ್ಶನ ಪಡೆದರೆ ತನ್ನದಾದ ಚಿಂತನೆಗಳನ್ನು ಅನುಷ್ಠಾನಗೊಳಿಸಿ ಕೃಷಿಯಲ್ಲೇ ಸಾಧನೆ ಮಾಡಬೇಕೆಂಬ ಹಂಬಲ ರಾಮ್ ಅವರದಾಗಿದೆ. ತಂದೆ ನಾಗಪ್ಪಯ್ಯ ಹೆಬ್ಬಾರ್ ಸಹಕಾರ ನೀಡುತ್ತಿದ್ದಾರೆ.

ಈ ತೋಟದ ನಾಟಿ ತೆಂಗಿನ ಗಿಡಗಳ ನರ್ಸರಿ ಮಾಡಿ ಗಿಡಗಳನ್ನು ಮಾರಾಟ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನರ್ಸರಿ ಉದ್ಯಮ ಆರಂಭಿಸುವ ಯೋಚನೆ-ಯೋಜನೆ ರಾಮ್ ಅವರದಾಗಿದೆ

ರಾಮ್: 9742747474

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group