–ಡಾ. ರವೀಂದ್ರಗೌಡ ಪಾಟೀಲ, ಸಹಾಯಕ ಪ್ರಾಧ್ಯಾಪಕರು (ಮೀನುಗಾರಿಕಾ ವಿಜ್ಞಾನ), ಐ.ಸಿ.ಎ.ಆರ್- ಕೃಷಿ ವಿಜ್ಞಾನ ಕೇಂದ್ರ, ಮಂಗಳೂರು- ಡಾ|| ಟಿ.ಜೆ. ರಮೇಶ, ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು, ಐ.ಸಿ.ಎ.ಆರ್- ಕೃಷಿ ವಿಜ್ಞಾನ ಕೇಂದ್ರ, ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ ಕರ್ನಾಟಕ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಒಂದು. ಇಲ್ಲಿನ ಜನರು ಹೆಚ್ಚಾಗಿ ಸಮುದ್ರದ ಮೀನುಗಳನ್ನು ಆಹಾರವಾಗಿ ಬಳಕೆ ಮಾಡುವುದು ಸರ್ವೇ-ಸಾಮಾನ್ಯ. ಆದರೆ ವರ್ಷದಿಂದ ವರ್ಷಕ್ಕೆ ಜಗತ್ತಿನಾದ್ಯಾಂತ ಹಾಗೂ ಭಾರತದಲ್ಲಿಯೂ ಕೂಡಾ ಸಮುದ್ರದಿಂದ ಹಿಡಿಯಲ್ಪಡುವ ಮೀನಿನ ಉತ್ಪಾದನೆ ತುಂಬಾ ಕಡಿಮೆಯಾಗುತ್ತಿದೆ. ಅಲ್ಲದೆ, ಒಳನಾಡು ಮೀನು ಪಾಲನೆಯಿಂದ ಬರುವ ಮೀನಿನ ಉತ್ಪನ್ನವು ಹೆಚ್ಚಾಗುತ್ತಿದೆ.ಆದ್ದರಿಂದ ಹೆಚ್ಚಾಗುತ್ತಿರುವ ಜನಸಂಖ್ಯೆಗೆ ಸಸಾರಜನಕಯುಕ್ತ ಪೌಷ್ಟಿಕ ಆಹಾರ ಒದಗಿಸುವ ನಿಟ್ಟಿನಲ್ಲಿ ಮೀನಿನ ಉತ್ಪನ್ನಗಳ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಆದ್ದರಿಂದ ಇತ್ತೀಚಿನ ದಿನಗಳಲ್ಲಿ ಒಳನಾಡು ಮೀನು ಪಾಲನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಬರುವ ದಿನಗಳಲ್ಲಿ ಒಳನಾಡು ಮೀನು ಪಾಲನೆ ನಮ್ಮ ರಾಜ್ಯದಲ್ಲಿ ಅಲ್ಲದೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಳ್ಳಲಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಳನಾಡು ಮೀನು ಪಾಲನೆಗೆ ಕಂಡುಬರುವ ಸಮಸ್ಯೆಗಳು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಳನಾಡು ಮೀನು ಪಾಲನೆಗೆ ಕಂಡು ಬರುವ ಮುಖ್ಯ ಸಮಸ್ಯೆ ಎಂದರೆ ಮೀನು ಪಾಲನೆಗೆ ಅವಶ್ಯವಿರುವ ಮೀನು ಮರಿಗಳ ಪೋರೈಕೆ. ಸದ್ಯಕ್ಕೆ ದಕ್ಷಿಣ ಕನ್ನಡ ಜಿಲ್ಲೆಗೆ ಸಿಹಿನೀರಿನ ಮೀನು ಮರಿಗಳು, ಬಿ.ಆರ್.ಪಿ(ಶಿವಮೊಗ್ಗೆ), ಆಂಧ್ರ ಪ್ರದೇಶ, ಕೇರಳ ಮತ್ತು ಕೋಲ್ಕೋತಾದಿಂದ ತರಿಸಿಕೊಳ್ಳಲಾಗುತ್ತಿದೆ. ಆದ್ದರಿಂದ ಇಲ್ಲಿಯ ಮೀನು ಕೃಷಿಕರು ತಾವೇ ಮೀನು ಮರಿಗಳ ಉತ್ಪಾದನೆಗೆ ಮುಂದಾಗಬೇಕು. ಮೀನು ಕೃಷಿಕರು, ಕೋಆಪರೇಟಿವ್ ಸೋಸೈಟಿ/ಎಫ್.ಎಫ್.ಪಿ.ಒ/ ಸೆಲ್ಫ್ ಹೆಲ್ಪ ಗ್ರುಪ್ಸ್ ಇವುಗಳನ್ನು ಮಾಡಿಕೊಂಡು ತಂತ್ರಜ್ಞಾನ ಒದಗಿಸುವ ಸಂಸ್ಥೆಗಳಾದ ಐ.ಸಿ.ಎ.ಆರ್- ಕೃಷಿ ವಿಜ್ಞಾನ ಕೇಂದ್ರ, ಮಂಗಳೂರು, ಮೀನುಗಾರಿಕಾ ಮಹಾವಿದ್ಯಾಲಯ, ಮಂಗಳೂರು ಹಾಗೂ ಮೀನುಗಾರಿಕೆ ಇಲಾಖೆ ಇವುಗಳನ್ನು ಸಂಪರ್ಕಿಸಬೇಕು.
ಅಲ್ಲದೆ ಮೀನು ಕೃಷಿಕರು ಈ ರೀತಿ ಸಂಘಗಳನ್ನು ಹುಟ್ಟು ಹಾಕಿ ಸಂಘಟಿತರಾಗುವುದರಿAದ ಮೀನು ಮಾರುಕಟ್ಟೆಯ ಸಮಸ್ಯೆಗೂ ಪರಿಹಾರ ಸಿಗುವುದು.
ಮೀನು ಪಾಲನೆಯ ಮಹತ್ವ-
ಮೀನು ಒಂದು ಅತೀ ಹೆಚ್ಚು ಸಸಾರಜನಕ ಹೊಂದಿದ ಪೌಷ್ಠಿಕ, ಅತೀ ಸುಲಭವಾಗಿ ಜೀರ್ಣವಾಗುವ ಆಹಾರವಾಗಿದೆ. ಆದ್ದರಿಂದ ಇದನ್ನು ಎಲ್ಲ ವಯೋಮಾನದವರೂ ಎಲ್ಲಾ ಋತುಗಳಲ್ಲಿಯೂ ಕೂಡಾ ಸೇವನೆ ಮಾಡಬಹುದು. ಅಲ್ಲದೇ ಮೀನು ಪಾಲನೆಯು ಕಡಿಮೆ ಖರ್ಚಿನಲ್ಲಿ, ಕಡಿಮೆ ಶ್ರಮದಲ್ಲಿ ಅತೀ ಹೆಚ್ಚಿನ ಲಾಭ ಕೊಡುವ ಉದ್ಯಮವಾಗಿದೆ. ಅಲ್ಲದೇ ಮೀನು, ಪಶುಸಂಗೋಪನೆಯಲ್ಲಿ ಬರುವ ಬೇರೆ ಪ್ರಾಣಿಗಳಿಗೆ ಹೋಲಿಸಿದರೆ ಅತೀ ಕಡಿಮೆ ಎಫ್.ಸಿ.ಆರ್ ಹೊಂದಿದ ಪ್ರಾಣಿಯಾದ್ದರಿಂದ ಕಡಿಮೆ ಆಹಾರ ಸೇವಿಸಿ ಹೆಚ್ಚಿನ ಮಾಂಸ ಕೊಡುವ ಪ್ರಾಣಿಯಾಗಿದೆ. ಇದರಿಂದ ರೈತರಿಗೆ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯವಾಗುತ್ತದೆ.
ಮೀನು ಪಾಲನೆಗೆ ಸೂಕ್ತವಾದ ಸ್ಥಳದ ಆಯ್ಕೆ-
ರೈತರ ಜಮೀನಿನಲ್ಲಿ ಯಾವಾಗಲೂ ನೀರಿನಿಂದ ಆವೃತ್ತವಾದ ಜೌಗು ಪ್ರದೇಶ ಅಥವಾ ಕೃಷಿಗೆ ಯೋಗ್ಯವಲ್ಲದ ಬಂಜರು ಭೂಮಿ ಇತ್ಯಾದಿಗಳನ್ನು ಮೀನು ಕೃಷಿಕರು ಮೀನು ಪಾಲನೆಗೆ ಲಾಭದಾಯಕವಾಗಿ ಉಪಯೋಗಿಸಿಕೊಳ್ಳಬಹುದು. ಅಲ್ಲದೇ ನೀರಿನ ಸೌಕರ್ಯ ಇರುವ ಪ್ರದೇಶ ಅಂದರೆ ಕೆರೆ,ಭಾವಿ, ಬೋರ್ ವೆಲ್ ಹತ್ತಿರದ ಪ್ರದೇಶಗಳನ್ನು ಅಯ್ಕೆ ಮಾಡಿಕೊಳ್ಳಬೇಕು.
ಮೀನು ಪಾಲನೆಗೆ ಕೊಳಗಳ ನಿರ್ಮಾಣ-
ಮೀನು ಕೊಳಗಳ ನಿರ್ಮಾಣಕ್ಕೆ ಆಯ್ಕೆ ಮಾಡಲಾದ ಸ್ಥಳದ ಮಣ್ಣು ಶೇ.೩೦ ರಷ್ಟು ಅಥವಾ ಅದಕ್ಕಿಂತಲೂ ಹೆಚ್ಚಿಗೆ ಜೇಡಿ ಮಣ್ಣಿನ ಅಂಶವನ್ನು ಹೊಂದಿದ್ದರೆ, ಕೊಳಕ್ಕೆ ಪ್ಲಾಸ್ಟಿಕ್/ಟಾರ್ಪಾಲಿನ್ ಶೀಟ್ ಹಾಕುವುದು ಬೇಡ. ಇಲ್ಲದಿದ್ದರೆ ಕೊಳಕ್ಕೆ ಪ್ಲಾಸ್ಟಿಕ್/ಟಾರ್ಪಾಲಿನ್ ಶೀಟ್ ಲೈನರ್ ಹಾಕಬೇಕು. ಕೊಳಗಳನ್ನು ಚೌಕಾಕಾರ ಅಥವಾ ಆಯತಾಕಾರವಾಗಿ ನಿರ್ಮಾಣ ಮಾಡುವುದರಿಂದ ಕೊಳಗಳ ನಿರ್ವಹಣೆ ಸುಲಭವಾಗುತ್ತದೆ. ಮೀನು ಕೊಳಗಳನ್ನು ಯಾವಾಗಲೂ ಪೂರ್ವ-ಪಶ್ಚಿಮ ಅಭಿಮುಖವಾಗಿ ನಿರ್ಮಾಣ ಮಾಡುವುದರಿಂದ ನೈಋತ್ಯ/ಈಶಾನ್ಯ ಮಾರುತಗಳಿಂದಾಗುವ ಕೋಳಗಳ ಬದುವಿನ ಮಣ್ಣಿನ ಸವಕಳಿಯನ್ನು ತಪ್ಪಿಸಬಹುದು. ಕೊಳದ ಬದುವುಗಳು 1 : 1.5 ಅಥವಾ 1 : 2ಸ್ಲೋಪ್‌ನ್ನು ಹೊಂದಿರಬೇಕು. ಕೊಳಗಳಲ್ಲಿ ಯಾವಾಗಲೂ 5 ಅಡಿ ನೀರು ನಿಲ್ಲಿಸುವ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು.
ಮೀನು ಪಾಲನೆಗೆ ಸೂಕ್ತವಾದ ಮೀನು ತಳಿಗಳು-
ಮೀನು ಪಾಲನೆಗೆ ಸೂಕ್ತವಾದ ತಳಿಗಳಲ್ಲಿ ಬಾರತೀಯ ಪ್ರಮುಖ ಗೆಂಡೆ ಮೀನುಗಳಾದ, ಕಾಟ್ಲಾ, ರೋಹು, ಮೃಗಾಲ್ ಮತ್ತು ವಿದೇಶಿ ಗೆಂಡೆ ಮೀನುಗಳಾದ ಬೆಳ್ಳಿ ಗೆಂಡೆ, ಹುಲ್ಲು ಗೆಂಡೆ, ಸಾಮಾನ್ಯ ಗೆಂಡೆ, ಅಮೂರ್ ಸಾಮಾನ್ಯ ಗೆಂಡೆ ಮುಖ್ಯವಾದುವುಗಳು. ಇವಲ್ಲದೆ, ಗಿಫ್ಟ್ ತಿಲಾಪಿಯಾ, ಮರೆಲ್ಸ್ ಮತ್ತು ಬೆಕ್ಕು ಮೀನುಗಳಾದ ಮಾಗೂರ್, ಸಿಂಘಿ, ಓಂಪಾಕ, ಪಂಗೇಸಿಯಸ್ ಕೂಡಾ ಸಾಕಾಣಿಕೆಗೆ ಸೂಕ್ತವಾದ ತಳಿಗಳು.
ಮೀನು ಪಾಲನೆ ಮಾಡುವ ವಿಧಾನ-
ಬಾರತೀಯ ಪ್ರಮುಖ ಗೆಂಡೆ ಮೀನುಗಳು ಸಸ್ಯಾಹಾರಿ ತಳಿಗಳಾದ್ದರಿಂದ ಒಂದನ್ನೊಂದು ತಿನ್ನುವುದಿಲ್ಲ ಹಾಗೂ ಆಹಾರಕ್ಕಾಗಿ ಪೈಪೋಟಿ ಮಾಡುವುದಿಲ್ಲ. ಆದ್ದರಿಂದ ಇವುಗಳ ಮಿಶ್ರ ತಳಿ ಪಾಲನೆ ಮಾಡುವುದು ಸೂಕ್ತ. ಇದರಿಂದ ಕೊಳದಲ್ಲಿ ಉತ್ಪಾದನೆಯಾಗುವ ಎಲ್ಲಾ ತರಹದ ನೈಸರ್ಗಿಕ ಆಹಾರ ಪರಿಪೂರ್ಣ ಬಳಕೆಯಾಗಿ ಮೀನಿನ ಮಾಂಸವಾಗಿ ಪರಿವರ್ತನೆ ಹೊಂದುವುದು ಹಾಗೂ ಮೀನು ಕೃಷಿಕರಗೆ ಹೆಚ್ಚಿನ ಇಳುವರಿ ಬರುತ್ತದೆ. ಈ ಸಸ್ಯಾಹಾರಿ ಮೀನು ತಳಿಗಳಿಗೆ ನೈಸvðಕ ಆಹಾರ ಒದಗಿಸಲು ಪ್ರತಿ ತಿಂಗಳು ಕಾಲು ಎಕರೆಗೆ 1೦೦ ಕೆ.ಜಿ. ದನದ ಹಸಿ ಸಗಣಿ, 3೦ ಕೆ.ಜಿ ಸ್ಮಣ್ಣ ಹಾಗೂ 15 ಕೆ.ಜಿ. ಎನ್.ಪಿ.ಕೆ. ರಸಗೊಬ್ಬರ ಹಾಕಬೇಕು. ಇದರಿಂದ ಉತ್ಪನ್ನವಾಗುವ ಸೂಕ್ಷö್ಮ ಸಸ್ಯ ಜೀವಿ ಹಾಗೂ ಸೂ ಪ್ರಾಣಿ ಜೀವಿಗಳನ್ನು ಈ ಮೀನುಗಳು ತಿಂದು ಬೆಳೆಯುತ್ತವೆ. ಪಕ್ಷಿಗಳ ಕಾಟದಿಂದ ಮೀನುಗಳನ್ನು ರಕ್ಷಿಸಲು ಕೊಳದ ಮೇಲೆ 2-3 ಇಂಚು ಕಣ್ಣಿನ ಬಲೆಯನ್ನು ಹರಡಬೇಕು. ಸಾಮಾನ್ಯವಾಗಿ ಜೂನ್-ಜುಲೈ ತಿಂಗಳಿನಲ್ಲಿ ಬಿತ್ತನೆ ಮಾಡಿ ಮೇ ತಿಂಗಳಿನಲ್ಲಿ ಕಟಾವು ಮಾಡಬೇಕು. ಈ ರೀತಿ ಸುಮಾರು 10-12 ತಿಂಗಳ ಸಾಕಾಣಿಕಾ ಅವಧಿಯಲ್ಲಿ ಒಂದೊದು ಮೀನು ಮರಿಯೂ ಕೂಡಾ ಸುಮಾರು 1ಕೆ.ಜಿ. ಗಾತ್ರವನ್ನು ಹೊಂದುತ್ತವೆ.
ಮೀನು ಪಾಲನೆಯ ಆರ್ಥಿಕತೆ-
ಒಂದು ಹೆಕ್ಟೇರ್ ಕೊಳದಲ್ಲಿ ಮೀನು ಕೃಷಿಯ ಅಂದಾಜು ಆರ್ಥಿಕತೆ
ಕೊಳ ನಿರ್ಮಾಣ 1,5೦,೦೦೦
ಇಂಧನ, ಪಂಪ್ ಸೆಟ್ 45,೦೦೦
ಕ್ಷೇತ್ರ ಸಾಮಗ್ರಿಗಳು ಇತ್ಯಾದಿ 25,೦೦೦
ಒಟ್ಟು 2,20,೦೦೦
ನಿರ್ವಹಣಾ ಖರ್ಚು
ಕೊಳದ ತಯಾರಿ 1೦,೦೦೦
ಸುಣ ್ಣ 2,5೦೦
ಸಾವಯವ ಮತ್ತು ರಸಾಯನಿಕ ಗೊಬ್ಬರ 1೦,೦೦೦
ಮೀನಿನ ಮರಿಗಳು ಮತ್ತು ಸಾಗಾಣಿಕೆ 15,೦೦೦
ಪೂರಕ ಆಹಾರಗಳು 5೦,೦೦೦
ಮೀನು ಹಿಡಿಯುವ ಖರ್ಚು 1೦,೦೦೦
ಇತರೆ ಖರ್ಚು 1೦,೦೦೦
ಒಟ್ಟು ಖರ್ಚು 1,೦7,5೦೦
ಆದಾಯ:
ಮೀನಿನ ಉತ್ಪನ್ನ (ಕೆ.ಜಿ.) 7,೦೦೦
ಮೀನು ಮಾರಾಟದ ಆದಾಯ
(ಪ್ರತಿ ಕೆ.ಜಿ. ಗೆ ರೂ. 5೦ ರಂತೆ) 3,5೦,೦೦೦
ನಿವ್ವಳ ಆದಾಯ 2,42,5೦೦