spot_img
Friday, October 18, 2024
spot_imgspot_img
spot_img
spot_img

ಕೃಷಿ ಲೋಕದ ದಾರಿ ತೋರಿಸುತ್ತವೆ ,ಕಣ್ಮನ ಸೆಳೆಯುತ್ತವೆ ಕೃಷಿಕರ ಗೇಟುಗಳು:

ಚಿತ್ರ-ಬರಹ: ಗಣಪತಿ ಹಾಸ್ಪುರ
ಸಮಾಜದಲ್ಲಿರುವ ಪ್ರತಿಯೊಬ್ಬರಿಗು ಆಹಾರಗಳು ಬೇಕು. ಅದನ್ನ ಬೆಳೆಯುವ ಕೃಷಿಭೂಮಿಯಲ್ಲಿ. ಬೆಳೆಯುವವ ಕೃಷಿಕ! ದೇಶಕ್ಕೆ ಅನ್ನವನ್ನು ಕೊಡುವ ಕಾರಣಕ್ಕೆ ಕೃಷಿಕರನ್ನು ದೇಶದ ಬೆನ್ನೆಲುಬು ಅಂತ ಕರೆದಿದ್ದಾರೆ. ಸಾಮಾನ್ಯವಾಗಿ ಎಲ್ಲ ಕೃಷಿಕರು ಸಿರಿವಂತರಲ್ಲ. ಆರ್ಥೀಕವಾಗಿ ಸದೃಡವಾಗಿ ಇದ್ದವರು, ತಮ್ಮ ಆದಾಯದಿಂದಲೇ ತಮಗೆ ಬೇಕಾದ ಸೌಲಭ್ಯಗಳನ್ನು ಕಾಲಕಾಲಕ್ಕೆ ವ್ಯವಸ್ಥೆ ಮಾಡಿಕೊಳ್ಳುತಿದ್ದಾರೆ. ಅಂದರೇ, ಮನೆ, ಕೊಟ್ಟಿಗೆ, ಗೂಡನ್, ಪಗಾರ, ಗೇಟು,ವಾಹನ, ….ಹೀಗೆ ಅವಶ್ಯಕತೆ ಉಳ್ಳ ದನ್ನು ಆಯಾಕಾಲಕ್ಕೆ ತಮಗೆ ಇಷ್ಟದಂತೆ ಮಾಡುತ್ತಾ/ ಖರೀದಿಸುತ್ತಾರೆ. ಹಿಂದೆಲ್ಲ ಕೃಷಿಕರಿಗೆ ಅಷ್ಟೇನು ಅನುಕೂಲವಿರಲಿಲ್ಲ. ಅವರ ಆದಾಯದಲ್ಲಿ ತುತ್ತು ಕುಳಿಗೂ ತತ್ವಾರ ಇತ್ತು. ಹೀಗಾಗಿ ಅಗತ್ಯತೆಯುಳ್ಳದನ್ನು ಮಾಡಿಕೊಳ್ಳುವುದಕ್ಕು ಕಷ್ಟವಿತ್ತು.
ಮನೆಯ ಸುತ್ತಮುತ್ತ ಚಿಗುರುವ ಗೂಟವನ್ನೆ ಹುಗಿದು ಬೇಲಿ ಕಟ್ಟಬೇಕಿತ್ತು. ಈಗ ಅವರವರ ಅನುಕೂಲಕ್ಕೆ ತಕ್ಕ ಹಾಗೇ ಐಬಿಎಕ್ಸ, ಮುಳ್ಳು ತಂತಿಯೋ, ಸಿಮೆಂಟ್ ಹಲಗೆಯೋ ಹಾಕಿಕೊಳ್ಳುತ್ತಾರೆ. ಹಿಂದೆ ಓಡಾಡುವ ಹಾದಿಗೆ  ನಿತ್ಯ ತೆಗೆದು ಹಾಕಿಕೊಳ್ಳಲು ಅನುವು ಆಗಬೇಕು ಎನ್ನುವ ಉದ್ದೇಶದಿಂದ ಮರದ ಸರಗೋಲನ್ನೆ ಹಾಕಿಕೊಳ್ಳುತ್ತಿದ್ದರು.ಆದ್ರೇ, ಈಗೀಗ ಸುಧಾರಣೆಯ ದಿನಮಾನದಲ್ಲಿ ಕಬ್ಬಿಣದ ಗೇಟುಗಳು ಆ ಜಾಗವನ್ನು  ಆಕ್ರಮಿಸಿಕೊಂಡು ಮೆರೆಯುತ್ತಿದೆ.
 ಭಿನ್ನ ಶೈಲಿಯ ಗೇಟು… 
 ಹಾಗೇ ಸುಮ್ಮನೆ ಗ್ರಾಮೀಣ ಪ್ರದೇಶದ ಕೃಷಿಕರ ಮನೆಗಳನ್ನು ಸುತ್ತಾಡಿದರೇ, ಥರಥರದ ಕಬ್ಬಿಣದ ಗೇಟುಗಳು ಕಾಣಸಿಗುತ್ತವೆ. ಪ್ರತಿಯೊಂದು ಗೇಟುಗಳ ವಿನ್ಯಾಸ, ಆಕಾರ ಭಿನ್ನ ಭಿನ್ನವಾಗಿ ಆಗಿರುತ್ತದೆ.ಒಂದರ ಗೇಟಿನ ಕ್ಕಿಂತ ಇನ್ನೊಂದರ ಗೇಟು ಆಕರ್ಷಕವಾಗಿದ್ದು , ಅದನ್ನು ಹೇಗೆ ಮಾಡಿದ್ದಾರೆ ಅಂತ ಒಮ್ಮೆ ಕಣ್ಣಾಯಿಸಿ ನೋಡುವಷ್ಟು ಕುತೂಹಲ ಉಂಟಾಗದೇ ಇರದು. ಅಷ್ಟೊಂದು ಮನಮೋಹಕವಾಗಿ ಕಾಣುವ ಕಬ್ಬಿಣದ ಗೇಟುಗಳು ಇಂದು ಏಲ್ಲೆಡೆ ಕಾಣುತ್ತಿದ್ದರೂ, ಹೋಸದಾಗಿ ಮಾಡುವವರಿಗೆ ಯಾವ ಥರದ್ದು ಮಾಡಿಸಬೇಕು ಎಂಬ ಗೊಂದಲವು ಉಂಟಾಗುತ್ತದೆ. ಯಾವ ಬಗೆಯದು ಮಾಡಿಸಿಕೊಂಡರೇ ನಮಗೆ ಅನುಕೂಲ ಆಗಬಹುದು,ಯಾವುದನ್ನು ಮಾಡಿಕೊಂಡರೇ ಕಡಿಮೆ ಖರ್ಚಿನಲ್ಲಿ ಸಿದ್ದವಾಗಬಹುದು….ಹೀಗೆ ಎಲ್ಲವನ್ನು ವಿಚಾರ ವಿನಿಮಯ ಮಾಡಿಕೊಂಡೆ ಕೃಷಿಕರು  ಆ ಕಾರ್ಯವನ್ನು ಮಾಡಿಸಿಕೊಳ್ಳಲು ಅಣಿಯಾಗುತ್ತಾರೆ.
ಕೆಲವರು ಕೇವಲ ಕಬ್ಬಿಣದ ಸರಳು/ ಪಟ್ಟಿಯಿಂದಲೇ ತಮಗೆ ಬೇಕಾದ ವಿನ್ಯಾಸದಲ್ಲಿ ಗೇಟುಗಳನ್ನು ಮಾಡಿಸಿಕೊಂಡರೇ, ಇನ್ನು ಕೇಲವರು ಕೆಲವೆ ಪಟ್ಟಿಯನ್ನು ಬಳಸಿಕೊಂಡು ತಗಡಿನ ಸೀಟ್ ನ್ನು ಹಾಕಿ ಗೇಟ ಮಾಡಿಸಿಕೊಳ್ಳುವವರು ಇದ್ದಾರೆ.ಗೇಟಿನ ಆಧಾರಕ್ಕೆ ಕೆಲವರು ಸಿಮೇಂಟ್ ಕಂಬ ಬಳಸಿದರೇ, ಇನ್ನು ಕೇಲವರು ಕಬ್ಬಿಣದ ರೌಂಡ್ ಪೈಪೋ, ಸ್ಕ್ವೇರ್ ಪೈಪನ್ನು ಉಪಯೋಗ ಮಾಡುವುದುಂಟು.ಏನೇ ಇರಲಿ, ಪ್ರತಿಯೊಬ್ಬರಿಗೂ ಅವಶ್ಯಕತೆ ಇರುವ ಈ ಗೇಟುಗಳನ್ನು ಅವರವರ ಕಲ್ಪನೆ, ಅವರ ಇಷ್ಟದಂತೆ ಮಾಡಿಸಿಕೊಂಡು ಬಳಕೆ ಮಾಡುತ್ತಾರೆ‌. ಅವರೆಲ್ಲರ ಗೇಟುಗಳು ಬೇರೆ ಬೇರೆ ವಿನ್ಯಾಸದಲ್ಲಿ ಇರುವುದರಿಂದ  ಅದು ಆಕರ್ಷಕವಾಗಿಯೇ ಕಾಣುತ್ತದೆ. ಹತ್ತಾರು ಗೇಟುಗಳನ್ನು ನೋಡಿದರೂ ಪ್ರತಿಯೊಂದರ ವಿನ್ಯಾಸದಲ್ಲಿ,  ಡಿಜೈನಲ್ಲಿ, ಅದ್ರ ಕ್ವಾಲಿಟಿಯಲ್ಲಿ, ಹಚ್ಚಿದ ಬಣ್ಣದಲ್ಲಿ ವ್ಯತ್ಯಾಸವಿದ್ದರೂ…. ಅವು ತನ್ನದೇ ಸೊಬಗು, ವೈಶಿಷ್ಟ್ಯ ದಿಂದ ನೋಡುಗರ ಮನಸೆಳೆಯುವಲ್ಲಿ ತಮ್ಮ ತನವನ್ನು ಉಳಿಸಿಕೊಂಡು, ನೈಜ ಸೊಬಗಿನಿಂದ ಜನರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿವೆ.
spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group