ಬರಹ: ಡಾ. ಬಸವರಾಜ್ ಮೈಸೂರು
ನಿಂಬೆ ಹಣ್ಣಿನ ವಾಸನೆಯನ್ನು ಹೊಂದಿರುವ ಅನ್ನು ಲೆಮೆನ್ ಗ್ರಾಸ್ ಅನ್ನು ನಿಂಬೆ ಹುಲ್ಲು ಎಂದು ಕರೆಯುತ್ತಾರೆ. ನೀರನ್ನು ಶುದ್ಧೀಕರಿಸಲು ವಿವಿಧ ವಿಧಾನಗಳನ್ನು ಬಳಸುತ್ತಾರೆ. ಕುಡಿಯುವ ನೀರಿಗೆ ತುಳಸಿ, ಲಾವಂಚ, ಸೊಗದೇ ಬೇರು ಮುಂತಾದವುಗಳನ್ನು ಉಪಯೋಗಿಸುತ್ತಾರೆ. ಈ ಪದಾರ್ಥಗಳ ಸಾಲಿನಲ್ಲಿ ಲೆಮನ್ ಗ್ರಾಸ್‌ಗೂ ಮಹತ್ವವನ್ನು ಕೊಡಬಹುದು. ಯಾವುದೇ ಜೀವಿಯು ಸುಸೂತ್ರವಾಗಿ ಬದುಕಿ ಉಳಿಯಲು ಶುದ್ಧ ನೀರು ಮೂಲಭೂತ ಅಗತ್ಯವಾಗಿದೆ. ನೀರು ನಿರ್ಜೀವವಾದ ದ್ರವ ಪದಾರ್ಥವಾಗಿದ್ದು ರಾಸಾಯನಿಕ ಫಾರ್ಮುಲಾವನ್ನು ಹೊಂದಿದೆ. ಗಾಳಿಯ ನಂತರ ನೀರು ಅತ್ಯಂತ ಅವಶ್ಯಕವಾದರಿಂದ ಜೀವ ಜಲವೆಂದು ಮಹತ್ವ ಪಡೆದಿದೆ. ಸರಿಯಾಗಿ ನೀರು ಕುಡಿಯದಿದ್ದರೆ ಉಂಡು ತಿಂದ ಆಹಾರ-ತಿಂಡಿಗಳು ಜೀರ್ಣವಾಗುವುದಿಲ್ಲ. ಆಹಾರದಿಂದ ಕಸುವು ಉತ್ಪಾದನೆಯಾಗಬೇಕಾದರೆ ಆಹಾರದಲ್ಲಿರುವ ಕಾರ್ಬೋಹೈಡ್ರೇಟ್ಸ್, ಪೋಷಕಾಂಶಗಳು, ಕೊಬ್ಬು ಕನಿಜ ಪದಾರ್ಥಗಳು ವಿಭಜನೆಯಾಗಬೇಕು. ಆಹಾರ ಕಸುವು ದೇಹದ ವಿವಿಧ ಅಂಗಾಂಗಳಿಗೆ ಸಾಗಾಣಿಕೆಯಾಗಬೇಕಾದರೆ ಆಮ್ಲಜನಕ ಮತ್ತು ನೀರು ಬೇಕು. ಸರಿಯಾಗಿ ಉಸಿರಾಡದಿದ್ದರೆ ಚೆನ್ನಾಗಿ ನೀರು ಕುಡಿಯದಿದ್ದರೆ ಜೀವಿಗಳಿಗೆ ಅನೇಕ ರೋಗಗಳು ಬರುತ್ತವೆ. ರೋಗಗಳಿಂದ ದೂರ ಉಳಿಯಲು ಆರೋಗ್ಯವನ್ನು ರಕ್ಷಿಸಿಕೊಳ್ಳಲು ಹಾಗೂ ಆಯುಷ್ಯ ಹೆಚ್ಚಿಸಿಕೊಳ್ಳಲು ಶುದ್ಧ ಗಾಳಿಯಂತೆ ಶುದ್ಧ ಸುರಕ್ಷಿತ ನೀರು ಬಹಳ ಅಗತ್ಯ
ಶುದ್ಧ ನೀರು ವಿವಿಧ ಕಾರಣಗಳಿಂದ ಕಲುಷಿತಗೊಳ್ಳುತ್ತಿದೆ, ಕುಡಿಯಲು ತೆಗೆದುಕೊಂಡರೆ ಹಿತವಾದ ಪರಿಮಳ ಇರುವುದಿಲ್ಲ ಲೆಮನ್ ಗ್ರಾಸ್ ಶುದ್ದ ನೀರು ತಯಾರಿಸಿಕೊಳ್ಳಲು ಪ್ರಕೃತಿ ನೀಡಿರುವ ಅಮೂಲ್ಯ ಸಸ್ಯಗಳಲ್ಲಿ ಒಂದಾಗಿದೆ. ಕೇರಳದಲ್ಲಿ ಬಹಳ ಕಾಲದಿಂದ ನೀರನ್ನು ಔಷಧಿಯ ಸಸ್ಯಗಳು, ಕಾಂಡಗಳು, ಬೇರುಗಳು, ಎಲೆಗಳನ್ನು ನೀರಿನಲ್ಲಿ ಹಾಕಿ ಕೆಲವು ಕಾಲ ಕುದಿಸಿ ನೀರನ್ನು ಶುದ್ಧೀಕರಿಸಿಕೊಳ್ಳುತ್ತಾರೆ. ವಿಶಿಷ್ಟ ಪರಿಮಳ ಇರುತ್ತದೆ. ಲೆಮನ್‌ಗ್ರಾಸನ್ನು ನೀರಿನಲ್ಲಿ ಹಾಕಿ ಕುದಿಸಿ ಶೋಧಿಸಿಕೊಂಡರೆ ಪರಿಶುದ್ಧ ಪರಿಮಳಯುಕ್ತ ವಿವಿಧ ಪೋಷಕಾಂಶಗಳನ್ನು ಹೊಂದಿರುವ ಕುಡಿಯುವ ನೀರು ಸಿದ್ಧವಾಗುತ್ತದೆ
ಲೆಮನ್ ಗ್ರಾಸಿನಲ್ಲಿ ವಿಟಮಿನ್ ಎ ಮತ್ತು ಸಿ ಫ್ಲೋಲಿಕ್ ಆಮ್ಲ, ಮೆಗ್ನೀಷಿಯಂ, ಜಿಂಕ್, ಕ್ಯಾಲ್ಸಿಯಂ, ಐರನ್ ಫೋವೊನಾಯಿಡ್ಸ್ ಮತ್ತು ಪೆನೋಲಿಕ್ ಅಂಶಗಳು ಇದ್ದು ವೈರಾಣುಗಳು, ರೋಗಾಣುಗಳು ಫಂಗಸುಗಳ ವಿರುದ್ಧ ಹೋರಾಡುವ ಶಕ್ತಿ ದೇಹಕ್ಕೆ ದೊರೆಯುತ್ತದೆ. ಕುಡಿಯುವ ನೀರು ತಯಾರಿಸಿಕೊಳ್ಳಲು ವಿತಮಿತವಾಗಿ ಲೆಮನ್ ಗ್ರಾಸ್ ಬಳಸಬೇಕು. ನೀರು ಲೆಮನ್ ಗ್ರಾಸ್ ಬಣ್ಣದಂತೆ ಆದರೆ ಕಾಯಿಸುವುದನ್ನು ನಿಲ್ಲಿಸಬಹುದು.
ಟೀ ತಯಾರಿಸುವಾಗ ಲೆಮನ್ ಗ್ರಾಸ್ ಹಾಕಿದರೆ ಪರಿಮಳ ಹೆಚ್ಚುತ್ತ ಲೆಮನ್ ಗ್ರಾಸ್‌ನಿಂದ ನಿಂಬೆಹಣ್ಣಿನ ಪಾನಕ ತಯಾರಿಸಿಕೊಂಡು ಕುಡಿಯಬಹುದು. ಅನ್ನ ಮಾಡುವಾಗ ಲೆಮನ್ ಗ್ರಾಸ್ ಎಲೆ ಹಾಕಿದರೆ ಅನ್ನದ ಸತ್ವ ಮತ್ತು ಪರಿಮಳ ಹೆಚ್ಚುತ್ತದೆ. ತಿಳಿ ಸಾರು ಮಾಡಿಕೊಂಡು ಊಟ ಮಾಡಬಹುದು. ಕೆಮ್ಮು, ಕಫ, ಚಳಿ, ನಡುಕ, ಮೈ-ಕೈ, ಕಾಲು ನೋವು ಮುಂತಾದ ಸಮಸ್ಯೆ ನಿವಾರಣೆಗೆ ಲೆಮನ್ ಗ್ರಾಸ್ ಸಹಾಯ ಮಾಡುತ್ತದೆ. ಲೆಮನ್ ಗ್ರಾಸ್ ಬೆಳೆಯುವುದು ಬಹಳ ಸುಲಭ. ಬೇರಿರುವ ಹುಲ್ಲನ್ನು ತಂದು ಫಲಬರಿತ ಮಣ್ಣು ತುಂಬಿದ ಕುಂಡ, ಪ್ಲಾಸ್ಟಿಕ್ ಚೀಲ, ಹಳೇಬಕೆಟುಗಳು ಮತ್ತು ಭೂಮಿಯ ಮೇಲೆ ನೆಟ್ಟರೆ ಬೆಳೆಯುತ್ತದೆ. ಸಕಾಲದಲ್ಲಿ ನೀರು ಕೊಡುತ್ತಿರಬೇಕು. ಎಲ್ಲೆಲ್ಲಿ ಹೆಚ್ಚು ಬೆಳೆಯುತ್ತದಯೋ ಅಲ್ಲಿ ಹುಲ್ಲು ಕತ್ತರಿಸಿಕೊಂಡು ಉಪಯೋಗಿಸಿದರೆ ಲೆಮೆನ್ ಗ್ರಾಸ್ ಯದ್ವಾತದ್ವಾ ಬೆಳೆಯದೆ ಹದ್ದುಬಸ್ತಿನಲ್ಲಿ ಇರುತ್ತದೆ. ಕೈತೋಟದ ಅಂದಚೆAದ ಹೆಚ್ಚಿಸುತ್ತದೆ. ಆಮ್ಲಜನಕವನ್ನು ನೀಡುತ್ತದೆ