
ಶ್ರೀ ರಾಧಾಕೃಷ್ಣ ತೊಡಿಕಾನ, “ಕೃಷಿ ಬಿಂಬ ಪತ್ರಿಕೆ “ಯ ಪ್ರಧಾನ ಸಂಪಾದಕರು
2003 ರಲ್ಲಿ ಆರಂಭವಾದ ‘ಕೃಷಿಬಿಂಬ ಪತ್ರಿಕೆ’ ರಾಜ್ಯದ ಕೃಷಿಕರ ಮನೆ ಮನದಲ್ಲಿ ಹಸಿರು ಹರುಷ ಮೂಡಿಸಿದೆ.ಕೃಷಿಕರ ಸಾಧನೆ, ಯಶೋಗಾಥೆ, ಸಾಹಸ ಎಲ್ಲವನ್ನೂ ಚಿತ್ರ ಬರಹಗಳ ಮೂಲಕ ಓದಗರಿಗೆ ತಲುಪಿಸಿದೆ. ನೂರಾರು ಯುವ ಕೃಷಿಕರ, ಕೃಷಿಪರ, ಪರಿಸರ ಸ್ನೇಹಿ ಗೃಹೋದ್ಯಮನ್ನು ಅಪ್ಪಟ ಕೃಷಿ ಪತ್ರಿಕೋದ್ಯಮದ ಮೂಲಕ ಉತ್ತೇಜಿಸಿ, ಕೃಷಿಬಿಂಬ ಪತ್ರಿಕೆಯಲ್ಲಿ ಅವರನ್ನು ಗುರುತಿಸಿ ಅವರ ಉತ್ಪನ್ನಗಳನ್ನೂ ಮುನ್ನೆಲೆಗೆ ತಂದಿದೆ. ನಮ್ಮ ಹಸಿರು ಪಯಣದ ಬಗ್ಗೆ ನಮಗೆ ತೃಪ್ತಿ, ಖುಷಿಯಿದೆ. Krishibimba.com ಜಾಲತಾಣ ಕೂಡ ಜಗತ್ತಿಗೇ ಕೃಷಿಯ ಕೊಂಡಿ ಕೊಡುತ್ತಿದೆ. ಇಲ್ಲಿಯೂ ಕೃಷಿ ಲೇಖನ, ಕೃಷಿ ಸಾಧಕರ ಪರಿಚಯ, ಕೃಷಿ ಯಂತ್ರೋಪಕರಣಗಳ ಪರಿಚಯ, ಕೃಷಿ ಸುದ್ದಿ ವಿವಿಧ ಬೆಳೆಗಳ ಮಾಹಿತಿಗಳು ಮತ್ತು ಹಲವಾರು ವಿಚಾರ ವಿಶೇಷಗಳನ್ನು ನಿಮಗೆಂದೇ ಕೊಡುತ್ತಿದ್ದೇವೆ.




