spot_img
Wednesday, October 23, 2024
spot_imgspot_img
spot_img
spot_img

ಸಾವಯವ ಕೃಷಿ ಮಾಡ್ತಿದ್ದೀರಾ?ಹಾಗಾದ್ರೆ ಕಾಂಪೋಸ್ಟ್ ಬಗ್ಗೆ ಈ ಮಾಹಿತಿ ನಿಮಗೆ ತಿಳಿದಿರಲೇಬೇಕು:

ಒಂದು ಹೆಮ್ಮರದ ಬುಡದಲ್ಲಿರುವ ಕಳೆ ಗಿಡಗಳನ್ನು ಕಿತ್ತು ತೆಗೆದು ಆದರಡಿಯ ಮಣ್ಣನ್ನು ಪರೀಕ್ಷಿಸಿದರೆ ಜೀವಂತ ಮಣ್ಣು ಹೇಗಿದೆ ಅದರಲ್ಲಿ ಎಷ್ಟು ಜೀವಜಾಲ ತುಂಬಿಕೊಂಡಿದೆ ಎನ್ನುವುದನ್ನು ಗಮನಿಸಬಹುದು. ಇದೆಲ್ಲಾ ಹೇಗೆ ಸಾಧ್ಯ ಎಂಬ ಪ್ರಶ್ನೆ ಸಹಜವಾಗಿ ಮೂಡಿದರೂ ಚಿಂತನೆಗೆ ಗ್ರಾಸವಾದಾಗ ಅರ್ಥವಾಗಲು ಹೆಚ್ಚು ಸಮಯ ಹಿಡಿಯದು. ಉತ್ತರ ಮರದ ಅಡಿಯಲ್ಲೇ ಇದೆ

ಮರದ ಹಣ್ಣಾದ ಎಲೆ, ಒಣಗಿ ಕುಂಬಾಗಿ ಬಿದ್ದ ಕೊಂಬೆಗಳು, ಮರದ ಮೇಲಿನ ಪ್ರಾಣಿ-ಪಕ್ಷಿಗಳು ಸುರಿದ ತ್ಯಾಜ್ಯ ಎಲ್ಲವನ್ನೂ ಕಾಂಪೋಸ್ಟ್ ಕ್ರಿಯೆಗೆ ಗುರಿಪಡಿಸಿದ ಮಳೆಯ ಸಾರಜನಕಯುಕ್ತ ನೀರು. ಇದು ನಮ್ಮ ಪ್ರಕೃತಿಯೇ ಮಣ್ಣನ್ನು ಜೀವಂತವಾಗಿರುವ ಸೂತ್ರ. ಇಲ್ಲಿ ಮಾನವನ ಹಸ್ತಕ್ಷೇಪವಾದಾಗ ಮಾತ್ರ ಹಾನಿಯಾಗಬಹುದು. ಹೊರತಾಗಿ ಉಳಿದಂತೆ ಯಾವುದೇ ತೊಂದರೆಗೆ ಒಳಗಾಗದೆ ನಿರಂತರ ಮಣ್ಣನ್ನು ಜೀವಂತವಾಗಿಡುವ ಕ್ರಿಯೆ ಸಾಗುತ್ತಿರುತ್ತದೆ ಮಳೆಗಾಲದಲ್ಲಿ ಎಲ್ಲವೂ ಕೊಳೆತು ಗೊಬ್ಬರವಾಗಿ ಮಣ್ಣಿಗೆ ಸೇರುತ್ತದೆ. ಬೇಸಿಗೆಯ ಬಿಸಿಲಿಗೆ ಮಣ್ಣಿಗೆ ಹಾನಿಯಾಗದಂತೆ ಪುನಃ ಮಣ್ಣಿಗೆ ಮರಗಿಡಗಳ ತ್ಯಾಜ್ಯ ಬೀಳುತ್ತಿರುವುದು ಪ್ರಕೃತಿಯ ನಿಯಮ.ಈ ನಿರಂತರ ಕ್ರಿಯೆಯಿಂದಲೇ ನಿಸರ್ಗ ನಿತ್ಯ ಹಸುರಾಗಿ ಬೆಳೆಯುತ್ತಲೇ ಸಾಗುತ್ತಿದೆ.

ಇಲ್ಲಿ ಕೃಷಿ ಮಾಡುವ ಮಂದಿ ಯಾವ ಕಂದಾಯ ಇಲಾಖೆಯ ಪಹಣಿ ಪತ್ರವನ್ನೂ ಪಡೆದವರಲ.್ಲ ಈ ವಿಚಾರಗಳನ್ನು ಕೃಷಿಕರು ಅರ್ಥಮಾಡಿ ಕೃಷಿಗೆ ಇಳಿದರೆ ನಿಮ್ಮ ಸಾಯುವ ಕೃಷಿ ಕಲ್ಪನೆಗೆ ಉತ್ತರ ಸಿಗುತ್ತದೆ

ಇನ್ನೊಂದು ವಿಚಾರ ನೆನಪಾಗುತ್ತದೆ. ನಾನು ಬೆಂಗಳೂರಿನ ಒಂದು ಸಾವಯುವ ಸೆಮಿನಾರ್ ಅಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದೆ. ಎಲ್ಲಾ ಸ+ಅವಯವ ಕೃಷಿಯ ಬಗ್ಗೆ ನಲವತ್ತೈದು ನಿಮಿಷ ಸುದೀರ್ಘವಾಗಿ ಹೇಳಿ ಪ್ರಶ್ನೋತ್ತರಗಳು ಎಡೆ ಮಾಡಿಕೊಟ್ಟಿದ್ದೆ. ಆಗ ಭಾಗವಹಿಸಿದ್ದ ತರುಣ ರೈತ ಬಂಧು ಕೇಳಿದ ಪ್ರಶ್ನೆ. ಗೊಬ್ಬರ ತಯಾರಿಸಲು ನೀವು ತಿಳಿಸಿದ ಎಲ್ಲಾ ಪರಿಕರಗಳನ್ನು ಸಂಗ್ರಹಿಸಿ ಸಿದ್ಧಪಡಿಸಲು ಎಲ್ಲರಿಂದಲೂ ಸಾಧ್ಯವೇ?. ಇನ್ನೊಬ್ಬ ಯುವಕ ಕೇಳಿದ ಪ್ರಶ್ನೆ ವಿಚಿತ್ರವಾಗಿತ್ತು. “ಮಾಡಲು ಬೇರೆ ಕೆಲಸ ಇಲ್ಲದ ಮಂದಿಗೆ ನಿಮ್ಮ ವಿಚಾರ ಸರಿಯಾಗಿದೆ. ಆದರೆ ನನ್ನಂತ ಒಬ್ಬ ಎಲ್ಲ ಸಮಸ್ಯೆಗಳಿಗೂ ಸ್ಪಂದಿಸಬೇಕಾದವನಿಗೆ ಸಾಧ್ಯವೇ? ಪ್ರಶ್ನೆ ಕೇಳಿದವರು ನಾನು ತಬ್ಬಿಬ್ಬಾದೆ ಎಂದೇ ತಿಳಿದರು. ಆದರೆ ಆಗಲೇ ಹೇಳಿದೆ, ನಿಮ್ಮ ಪ್ರಶ್ನೆ ಎಡೆಬಿಡಂಗಿಗಳಿಗೆ ಸರಿ ಹೊಂದುತ್ತದೆ ಎಂದೆ.

“ಮನಸ್ಸಿದ್ದರೆ ಮಾರ್ಗವಿದೆ”. ಇದು ನಮ್ಮ ಹಿರಿಯರ ಗಾದೆ ಎಂದಿಗೂ ಸತ್ಯವಲ್ಲವೇ, ಹಾಗೆಯೇ “ಈಸಬೇಕು ಇದ್ದು ಜೈಸಬೇಕು” ಎನ್ನುವುದು ಕೂಡ. ಮನುಷ್ಯ ಮನಸ್ಸು ಮಾಡಿದರೆ ಎವರೆಸ್ಟ್ ಕೂಡ ಏರಬಲ್ಲ ಎನ್ನುವುದು ಈಗಾಗಲೇ ಸಾಬೀತಾಗಿದೆ. ಪ್ರವಾಹ ಬಂದಿದೆ ಎಂದು ಮುಳುಗುವ ಮುನ್ನ ಎಚ್ಚರ ಅಗತ್ಯ. ಈಜಲು ಕಲಿತರೆ ಮುಳುಗುವ ಪ್ರಮೇಯವಿಲ್ಲ. ಸಾವಯವ ಕೃಷಿಯ ಆರಂಭದ ಹೊಸಿಲಲ್ಲಿ ಶ್ರಮದಾಯಕ ವೆಂದು ಭಾವಿಸಿದರೂ ಮುಂದೆ ಅದು ನೈಸರ್ಗಿಕ ಕೃಷಿಗೆ ಸಾಗುವ ದಾರಿಯನ್ನುವುದನ್ನು ಮರೆಯಬೇಡಿ.

ರಾಸಾಯನಿಕಗಳು ಮಣ್ಣಿನ ಜೀವಿಗಳನ್ನು ಕೊಲ್ಲುತ್ತದೆ. ರೈತ ಹುಲುಸಾದ ಫಸಲು ಪಡೆಯಲು ಮಣ್ಣಿನ ಜೀವ ಜಾಲಗಳನ್ನು ರಕ್ಷಿಸಲೇಬೇಕು. ನಾವು ಮಣ್ಣಿಗೆ ಎಸೆಯುವ ಗೊಬ್ಬರ ಮಣ್ಣಿನಲ್ಲಿ ಸೇರಲು ಈ ಸ್ನೇಹಜೀವಿಗಳು ಅಗಾಧ ಪ್ರಮಾಣದಲ್ಲಿ ಅಭಿವೃದ್ಧಿಯಾಗಲೇಬೇಕು. ಆಗ ನಮ್ಮ ಮಣ್ಣು ಫಲವತ್ತಾಗುತ್ತದೆ. ಮಣ್ಣನ್ನು ಫಲವತ್ತಾಗಿಸಲು ಆರಂಭದ ಮೂರು ನಾಲ್ಕು ವರ್ಷ ಕಳಿತ ಗೊಬ್ಬರಗಳನ್ನು ಮಣ್ಣಿಗೆ ಎಸೆಯಲೇಬೇಕು. ಮಣ್ಣು ಜೀವಂತವಾಗಲು ಶ್ರಮ ಅಗತ್ಯ. ಜೀವಂತ ಮಣ್ಣಿನಲ್ಲಿ ಕಳೆ ಗಿಡಗಳು ಬೆಳೆಯುತ್ತವೆ.

ಈ ಕಳೆಗಳನ್ನು ಸವರಿ ಪುನಃ ಮಣ್ಣಿಗೆ ಸೇರಿಸಿದರೆ ನೆಲವೊಂದು ಮುಚ್ಚಿಗೆಯಾಗಿ ಪೋಷಕಾಂಶ ಪೋಲಾಗುವುದನ್ನು ತಡೆಯಲು ಸಾಧ್ಯವಾಗುತ್ತದೆ. ಬಿಸಿಲಿರುವಾಗಲೇ ಕಳೆ ಸವರಿ ಮಣ್ಣಿನ ಮೇಲೆ ಹಗುರವಾಗಿ ಹಾಕಿದಾಗ ಅವು ಬಾಡುತ್ತವೆ. ಅದರ ಮೇಲೆ ಸಾರಜನಕಯುಕ್ತ ಮಳೆ ನೀರು ಬಿದ್ದಾಗ ಅವು ಕೊಳೆತು ನೆಲಕಚ್ಚುತ್ತವೆ. ನೆಲಕಚ್ಚಿದ ಹಸಿರು ಗೊಬ್ಬರ ಮತ್ತೆ ಮಣ್ಣಿನ ಜೀವಜಾಲಕ್ಕೆ ಆಹಾರವಾಗಿ ಮಣ್ಣಿಗೆ ಬೆರೆಯುತ್ತದೆ. ಈ ಮಣ್ಣಿನ ಸಾರವನ್ನು ಹೀರಿದ ನಮ್ಮ ಬೆಳೆ ಹುಲುಸಾಗಿರುತ್ತದೆ ಇದು ಪ್ರಾಕೃತಿಕ ಧರ್ಮ.

ಪ್ರಕೃತಿಗೆ ವಿರುದ್ಧವಾಗಿ ಕೃಷಿ ಮಾಡುವುದೇ ಒಂದು ಅಪರಾಧ. ಶೀಘ್ರ ಹಣ ಸಂಪಾದಿಸುವ ಮನಸ್ಥಿತಿಯೇ ಇದಕ್ಕೆಲ್ಲ ಕಾರಣ. ಹನಿಗೂಡಿ ಹಳ್ಳವಾಗಬೇಕು. ಆಗ ತೆನೆಗೂಡಿ ಬಳ್ಳವಾಗುವುದು ಸಹಜ. ಈ ಸಹಜ ಕೃಷಿಯಿಂದ ಮುಂದೆ ಅನಾಯಾಸ ಬೆಳೆ ಬಂದಾಗ ನಾವು ಸಂಭ್ರಮಿಸದೆ ವಿಧಿಯಿಲ್ಲ.

ಸಾವಯವ ಕೃಷಿಗೆ ತೊಡಗುವ ಮಂದಿ ಮೊದಲು ಸಮೃದ್ಧವಾದ ಮಣ್ಣಿಗೆ ಎಸೆಯುವ ಕಾಂಪೋಸ್ಟಿAಗ್ ಕಡೆಗೆ ಗಮನ ಹರಿಸಲೇಬೇಕು. ಕಂಪೋಸ್ಟ್ ಎರಡು ವಿಧಗಳ ತಯಾರಿಸಬಹುದು ಒಂದು ಎರೆಗೊಬ್ಬರ, ಎರಡನೆಯದು ಎಲ್ಲಾ ತ್ಯಾಜ್ಯಗಳನ್ನು ಸೇರಿಸಿ ತಯಾರಿಸುವ ಕಂಪೋಸ್ಟ್ ಗೊಬ್ಬರ. ಎರೆಗೊಬ್ಬರಕ್ಕೆ ತೊಟ್ಟಿಗಳು ಬೇಕು. ಕಂಪೋಸ್ಟ್ ತಯಾರಿಸಲು ನೆರಳಿನ ಜಾಗಗಳು ಸಾಕು. ನನ್ನ ಸುದೀರ್ಘ ಉತ್ತರ ನೆರೆದ ಶಿಬಿರಾರ್ಥಿಗಳು ಮೌನವಾಗಿರಲು ಕಾರಣವಾಗಿತ್ತು.

ಇಂದು ರಾಸಾಯನಿಕ ಬಳಸಿದ ಅನೇಕ ಆಹಾರ ಬೆಳೆೆಗಳು ರುಚಿಕರವಾಗಿದೆಯೇ? ತರಕಾರಿಗಳು ತಿನ್ನುವಂತಿಲ್ಲ. ಬೇಯಿಸಿದರೆ ಬೇಯುವುದೇ ಹೊರತು ತಿನ್ನುವಾಗ ಹಸಿಯಂತೆಯೇ ಭಾಸವಾಗುವುದು. ತೊಂಡೆಕಾಯಿ, ಬೀನ್ಸ್, ಅಲಸಂಡೆಗಳು, ಜಗಿದೂ ಜಗಿದೂ ತಿನ್ನುವಂತಿದ್ದರೆ ಸೌತೆಕಾಯಿ, ಕುಂಬಳಕಾಯಿ, ಮುಂತಾದ ದೀರ್ಘಕಾಲ ಉಳಿಯುವ ತರಕಾರಿ ತಿಂಗಳಲ್ಲಿ ಕೊಳೆಯುತ್ತವೆ
ನಮ್ಮ ಪ್ರಕೃತಿಯೇ ಒಂದು ವಿಚಿತ್ರ. ಅದು ತನಗೆ ಬೇಕಾದ ಸಸ್ಯರಾಶಿಯಿಂದ ಮಣ್ಣನ್ನು ರಕ್ಷಿಸುತ್ತದೆ. ಒಂದು ಎಕರೆ ಪ್ರದೇಶದಲ್ಲಿ ನಾಲ್ಕಾರು ವಿಧದ ಮಣ್ಣನ್ನು ಕಾಣಬಹುದು. ಬೇಸಿಗೆಯಲ್ಲಿ ಬಾಡಿಕೊಂಡಿದ್ದ ಸಸÀ್ಯ ಚೇತನ ಮಳೆ ನೀರು ಭೂಮಿಗೆ ಬಿದ್ದ ಮಣ್ಣು ಸಾರಜನಕ ಸಂಪನ್ನವಾದಾಗ ಎಲ್ಲವೂ ಮಣ್ಣಿನಲ್ಲಿ ಹುಲುಸಾಗಿ ಬೆಳೆಯುತ್ತವೆ.

ಬೆಳೆದ ಸಸ್ಯಗಳಲ್ಲಿ ವಿವಿಧ ಜಾತಿಯವುಗಳಿರಬಹುದು. ಕೆಲವು ದ್ವಿದಳ ಧಾನ್ಯಗಳ ಜಾತಿಗೆ ಸೇರಿದ ಕಾಡು ಸಸ್ಯಗಳು. ಅವುಗಳ ಬೀಜ ಯಾರು ಬಿತ್ತಿ ಬೆಳೆದರು? ಅದೇ ಪ್ರಕೃತಿ ತನ್ನ ಒಡಲಲ್ಲಿ ಅವಿತಿಟ್ಟುಕೊಂಡು ಬೀಜಗಳು ಒಂದು ರೀತಿಯಲ್ಲಿ ಬ್ಯಾಂಕ್ ಠೇವಣಿಯಂತೆ. ಹುಲ್ಲು ಕಂಠಿಗಳು ಭೂ ಮಣ್ಣಿಗೆ ರಕ್ಷಾ ಕವಚವಿದ್ದಂತೆ. ಮಣ್ಣಿನ ಸಾರ ಬೆಳಕಿಗೆ ಪೋಲಾಗದಂತೆ ನೋಡಿಕೊಳ್ಳಲು ಈ ಮುಚ್ಚಿಗೆ. ಇದರ ಅರ್ಥ ನಾವು ಕೃಷಿ ಮಾಡುವ ಸಂದರ್ಭವೂ ಮಣ್ಣು ಬಿಸಿಲಿಗೆ ಮಳೆಗೆ ನೇರವಾಗಿ ಕಾಣಿಸದಂತೆ ಮುಚ್ಚಿದರೆ ನಮ್ಮ ಬೆಳೆದ ಗಿಡಗಳು ಸಾಕಷ್ಟು ಪೋಷಕಾಂಶ ಹೀರಲು ಅನುಕೂಲವಾಗುತ್ತದೆ ಎಂದಲ್ಲವೇ! ನಮ್ಮ ಬೇಲಿಯ ಸುತ್ತಲೂ ವಿವಿಧ ಜಾತಿಯ ಕಳೆಗಿಡಗಳು, ಕಾಡುಗಳು ಬೆಳೆದಿದ್ದು ಅವುಗಳನ್ನೆಲ್ಲ ಸವರಿ ನೆಲಹಾಸಿಗೆ ಉಪಯೋಗಿಸುವುದು ಬಹಳ ಸುಲಭ.

ಹರಿತ ಕತ್ತಿಯಿದ್ದರೆ ಸಾಕು. ಯಂತ್ರ ಬೇಕಿಲ್ಲ. ನಾಟಿ ಮಾಡಿದ ಗಿಡಗಳಿಗೆ ಸರಿಯಾಗಿ ಸೂರ್ಯನ ಬಿಸಿಲು ಸಿಗುವಂತೆ ಮಾಡಿದರೆ ಸೊಂಪಾಗಿ ಬೆಳೆಯುತ್ತದೆ. ನಿಸರ್ಗದ ನಿಯಮವೇ ಹಾಗೆ. ಎತ್ತರಕ್ಕೆ ಬೆಳೆದ ಸಸ್ಯಗಳ ಕೆಳಗೆ ಕಳೆ ಗಿಡಗಳು ಹುಲುಸಾಗಿ ಬೆಳೆಯುವುದಿಲ.್ಲ ಬೆಳೆದ ಕಳೆ ಕಿತ್ತು ಬಿಸಿಲುಗೊಡ್ಡಿದರೆ ಅವುಗಳು ಗಿಡಗಳಿಗೆ ಬೇಕಾದ ಪೋಷಕಾಂಶ ನೀಡುವ ಗೊಬ್ಬರಗಳಾಗಿ ಬದಲಾಗುತ್ತದೆ. ಸೂಕ್ಷ್ಮದೃಷ್ಟಿ ನಮ್ಮಲ್ಲಿದ್ದರೆ ಸುಲಭವಾಗಿ ಗಿಡಗಳಿಗೆ ಆಹಾರ ಸಿಗುವುದು ಖಚಿತ. ಈ ಪ್ರಯೋಗ ನನ್ನ ಪಾಲಿಗೆ ವರದಾನವಾಗಿದೆ

ನಮ್ಮ ಕೃಷಿಭೂಮಿ ನಾನು ಕಂಡAತೆ ಈಗಾಗಲೇ ವಿವರಿಸಿದಂತೆ ನಮ್ಮ ಕರ್ತವ್ಯ ಮಾಡಿದರೆ ಸಾಕು ಒಳ್ಳೆಯ ಫಲ ನೀಡುತ್ತದೆ. ಕೃಷಿಭೂಮಿಯನ್ನು ಸ್ವಚ್ಛಗೊಳಿಸಬೇಡಿ ಮನೆಸುತ್ತ ಸ್ವಚ್ಛಗೊಳಿಸಿ. ಆ ತ್ಯಾಜ್ಯಗಳನ್ನೆಲ್ಲಾ ಕಾಂಪೋಸ್ಟ್, ಎರೆಹುಳಗಳಿಗೆ ಆಹಾರವಾಗಿ ಉಪಯೋಗಿಸಿ. ಮನೆ ಸುತ್ತ ತುಳಸಿ ಗಿಡ ಹಾಕಿ. ಅವುಗಳಿಗೆಲ್ಲಾ ತ್ಯಾಜ್ಯಗಳನ್ನು ಉಪಯೋಗಿಸಿ ಆಗ ಪರಿಸರ ಸಹ್ಯ ಕೃಷಿ ನಮ್ಮದಾಗುತ್ತದೆ. ಸೊಳ್ಳೆ ಕಾಟ ಕಡಿಮೆಯಾಗುತ್ತದೆ. ಅಂಗಳದಲ್ಲಿ ಮಳೆನೀರು ಬಸಿದು ನಮ್ಮ ಬೆಳೆಗಳಿಗೆ ಸಿಕ್ಕಾಗ ಹರಿದ ನೀರು ಕೊಚ್ಚಿಕೊಂಡು ಹೋದ ತ್ಯಾಜ್ಯವೆಲ್ಲಾ ಗಿಡಗಳಿಗೆ ಸಿಗುತ್ತದೆ. ಇದು ನಿಸರ್ಗ ಕೃಷಿಯ ಸರಳ ಸೂತ್ರ

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group