spot_img
Friday, October 18, 2024
spot_imgspot_img
spot_img
spot_img

ಹಳ್ಳಿಗೊಂದು ಹಾಲಿನ ಸೊಸೈಟಿ: ಹೈನುಗಾರಿಕೆಯಲ್ಲಿ ಯಶಸ್ಸು ಕಂಡ ಕಾಸರಗೋಡಿನ ಕೃಷಿಕನ ಸಕ್ಸಸ್ ಸ್ಟೋರಿ ಇದು!

ಬರಹ: ಆಶಾ ನೂಜಿ

ಹೈನುಗಾರಿಕೆ ಸುಲಭದ ಮಾತಲ್ಲ. ಹೈನುಗಾರಿಕೆ ಮಾಡಬೇಕೆಂದರೆ ಅದಕ್ಕೊಂದು ಬದ್ಧತೆ ಇರಬೇಕು. ದನಗಳಿಗೆ ಬೇಕಾದ ಮೇವು ಸಂಗ್ರಹಣೆಯಾಗಬೇಕು. ಹಾಲು ಕರೆಯುವ ಹೊತ್ತಿಗೆ ಏನೇ ಕೆಲಸವಿದ್ದರೂ ಬಿಟ್ಟು ಬರಬೇಕು. ಆಸಕ್ತಿ, ಶ್ರದ್ದೆ, ಪರಿಶ್ರಮದಿಂದ ಹೈನುಗಾರಿಕೆಯಲ್ಲಿ ಯಶಸ್ಸು ಕಾಣಬಹುದು. ಹಲವಾರು ಮಂದಿ ಹೈನುಗಾರಿಕೆಯಲ್ಲಿ ಸಾಧನೆ ಮಾಡಿದ್ದಾರೆ.ಅಂತಹವರಲ್ಲಿ ಕೊಡ್ಲಮೊಗರಿನ ಕೃಷ್ಣಮೂರ್ತಿ ಒಬ್ಬರು

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕೊಡ್ಲಮೊಗರು ಕೃಷ್ಣಮೂರ್ತಿಯವರು ಹೈನುಗಾರಿಕೆಯನ್ನು ಮಾಡುತ್ತಿರುವುದಲ್ಲದೆ ತನ್ನೂರಿನ ಹೈನುಗಾರರಿಗೆ ಬೇಕಾದ ಸಹಕಾರಿ ಸಂಘವನ್ನು ಕಟ್ಟಿ ಬೆಳೆಸಿದವರು. ಅಲ್ಲದೆ ಸ್ಥಳೀಯರಲ್ಲಿ ಹೈನುಗಾರಿಕೆಯ ಜಾಗೃತಿ ಹಾಗೂ ಉಪಕಸುಬಿನನ ಲಾಭ ಪಡೆಯುವಂತೆ ಮಾಡಿದರು.

ಕೃಷ್ಣಮೂರ್ತಿ ಕೃಷಿಕ ಕುಟುಂಬದವರು. ಇವರ ತಂದೆ ರಾಮ್ ಭಟ್ಟರು ಪ್ರಗತಿಪರ ಕೃಷಿಕರು. ಪರಂಪಾರಿಕೆ ಸಾಂಪ್ರದಾಯಿಕ ಹೈನುಗಾರಿಕೆಯನ್ನು ಅವಲಂಭಿಸಿಕೊಂಡು ಹಟ್ಟಿಗೊಬ್ಬರ ಬಳಸಿ ಉತ್ತಮ ಫಸಲು ತೆಗೆದವರು. ರಾಮಭಟ್ಟರ ಪತ್ನಿ ಗಂಗಾ ಅವರು ಕೂಡಾ ಕೃಷಿಯಾಸಕ್ತರು. ಕೃಷ್ಣಮೂರ್ತಿಯವರು ಚಿಕ್ಕಂದಿನಲ್ಲಿಯೇ ಕೃಷಿಯ ಒಲವು ಮೂಡಿಸಿಕೊಂಡು ಬೆಳೆದವರು. ಇವರು ಓದಿದ್ದು ಡಿ.ಫಾರ್ಮ. ಕೆಲವು ವರ್ಷ ಮೆಡಿಕಲ್ ರೆಪ್ ಆಗಿಯೂ ಕೆಲಸ ಮಾಡಿದ್ದರು. ಆದರೆ ಇವರ ಗಮನ ಹರಿದದ್ದು ಸಾಂಪ್ರದಾಯಿಕ ಕೃಷಿ ಮತ್ತು ಹೈನುಗಾರಿಕೆಯತ್ತ. ಪರಂಪರೆಯ ಸಾಂಪ್ರದಾಯಿಕ ಹೈನುಗಾರಿಕೆಗೆ ಹೊಸ ರೂಪ ಕೊಡಲು ಮುಂದಾದರು. ಇವರ ಆಶಯಕ್ಕೆ ಪೂರಕವಾಗಿ ಪತ್ನಿ ಗೌರಿ ನೂಜಿ ಬೆನ್ನೆಲುಬಾದರು. ಕೃಷಿ ಮತ್ತು ಹೈನುಗಾರಿಕೆಯಲ್ಲಿ ತನ್ನದೇ ಛಾಪು ಮೂಡಿಸಿಕೊಂಡು ಮಾದರಿ ಕೃಷಿಕರಾದರು. ಮಳೆ ನೀರ ಕೊಯ್ಲು, ಅಜೋಲ ಬೆಳೆ ಸೇರಿದಂತೆ ಹೊಸ ಹೊಸ ಪ್ರಯೋಗಗಳಿಗೆ ಒಡ್ಡಿಕೊಂಡರು.

ಹಳ್ಳಿಗೊಂದು ಹಾಲಿನ ಸೊಸೈಟಿ

ತೀರ ಗ್ರಾಮೀಣ ಭಾಗದ ಹಳ್ಳಿ. ಏರು ದಿನ್ನೆಗಳ, ಹಳ್ಳ ತಗ್ಗುಗಳಗಳ ಊರ ಹಾದಿ. ವಾಹನಗಳ ಸೌಕರ್ಯಗಳಿಲ್ಲ. ಅಂvಹ ಪ್ರದೇಶದಲ್ಲಿ ಹೈನುಗಾರಿಕೆಯನ್ನು ಉಪಕಸುಬಾಗಿ ಮಾಡುವುದೇ ಹರಸಾಹಸ. ಹಾಲು ಮನೆ ಬಳಕೆಯ ನಂತರ ಅಂಗಡಿ ಹೋಟೆಲ್‌ಗಳಿಗೆ ಮಾರಾಟ ಮಾಡುವುದು ಅನಿವಾರ್ಯ. ಈ ಸಮಸ್ಯೆಯಿಂದ ಪಾರಾಗಲು ತಮ್ಮೂರಿನಲ್ಲಿ ಹಾಲಿನ ಸೊಸೈಟಿ ತೆರೆದರೆ ನನಗೂ ಹಾಗೂ ತನ್ನೂರಿನ ಇತರ ಹೈನುಗಾರರಿಗೂ ಅನುಕೂಲವಾಗಬಹುದೆಂಬ ಯೋಜನೆ ಮೂಡಿತು. ಸೊಸೈಟಿಗೆ ಬೇಕಾದ ಮಾಹಿತಿಗಳನ್ನು ಕಲೆ ಹಾಕಿದ್ದಲ್ಲದೆ ಸಮಾನ ಮನಸ್ಕರಲ್ಲಿ ಸಮಾಲೋಚಿಸಿ ಕೇರಳದ ಹಾಲು ಉತ್ಪಾದನೆ ಮತ್ತು ಮಾರಾಟದ ಸಹಕಾರಿ ಸಂಸ್ಥೆಯ ಸಹಕರದೊಂದಿಗೆ ಹಾಲಿನ ಸೊಸೈಟಿ ಶುರು ಮಾಡಿದರು. ಹತ್ತಾರು ರೈತರನ್ನು ಹೈನುಗಾರಿಕೆಗೆ ಪ್ರೇರೇಪಿಸಿದರು. ಸಂಸ್ಥೆಯ ಸಾರಥ್ಯವನ್ನು ತಾನೇ ಹೆಗಲೇರಿಸಿಕೊಂಡರು

2008 ರಲ್ಲಿ ವರ್ಕಾಡಿ ಕ್ಷೀರೋತ್ಪಾದಕ ಸಹಕರಣ ಎಂಬ ಹೆಸರಿನಲ್ಲಿ ಆರಂಭವಾದ ಸೊಸೈಟಿಯಲ್ಲಿ ಈಗ ಸುಮಾರು 2,200 ಲೀಟರ್ ಹಾಲು ಸಂಗ್ರಹವಾಗುತ್ತಿದೆ ಎಂದರೆ ಅಚ್ಚರಿಯಾಗಬಹುದು. ಬಲ್ಕ್ ಮಿಲ್ಕ್ ಕೂಲರ್ ಇರುವುದರಿಂದ ಸುತ್ತಮುತ್ತಲಿನ ಸೊಸೈಟಿಯ ಹಾಲು ಈ ಬಿಎಮ್‌ಸಿಯಲ್ಲಿ ಸಂಗ್ರಹಿಸಲಾಗುತ್ತಿದೆ. ಅದಲ್ಲದೆ ಸ್ಥಳೀಯವಾಗಿ ಹೈನುಗಾರಿಕೆಗೆ ಅನುಕೂಲವಾಗಲಿ ಎಂದು ನಾಲ್ಕು ಕಡೆಗಳಲ್ಲಿ ಹಾಲು ಶೇಖರಣೆ ಕೇಂದ್ರವನ್ನು ತೆರೆಯಲಾಗಿದೆ. ವಿದ್ಯುತ್ ಸೌಲಭ್ಯದಲ್ಲಿ ಸ್ವಾವಲಂಬನೆ ಹೊಂದಿದ ಈ ಘಟಕವು ವಿದ್ಯುತ್ ಉತ್ಪಾದನೆಯ ಸೋಲಾರ್ ಪವರ್ ಪ್ಲಾಂಟ್ ನಿರ್ಮಿಸಿಕೊಂಡಿದೆ. ಕೇಂದ್ರ ಸರಕಾರದಿಂದ ಸೋಲಾರ್ ವಾಟರ್ ಹೀಟರ್ ದೊರೆತಿದೆ.

spot_img

ಸಂಬಂಧಿತ ಲೇಖನಗಳು

spot_img
- Advertisement -spot_img

ಇತ್ತೀಚಿನ ಲೇಖನಗಳು

error: Content is protected !!

Join Our

Group